ಕರ್ನಾಟಕ

ಗುಡುಗು, ಮಿಂಚು ಸಹಿತ ರಾಜ್ಯದಲ್ಲಿ ವರುಣನ ಅಬ್ಬರ

Pinterest LinkedIn Tumblr


ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ. ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಈ ಮೂಲಕ ಬಿಸಿಲ ಬೇಗೆಯಿಂದ ಬೆಂದಿದ್ದ ಭೂಮಿಗೆ ತಂಪೆರೆದಂತಾಯಿತು.

ರಾಜಧಾನಿಯಲ್ಲೂ ವರುಣ ಅಬ್ಬರಿಸುವ ಸಾಧ್ಯತೆ

ಮುಂದಿನ ಮೂರು ದಿನಗಳ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಜೊತೆಗೆ ರಾಜಧಾನಿಯಲ್ಲೂ ವರುಣ ಅಬ್ಬರಿಸುವ ಸಾಧ್ಯತೆ ಇದ್ದು, ಬಿಬಿಎಂಪಿಗೆ ಆರ್ಲಟ್ ಆಗಿರುವಂತೆ ಮಾಹಿತಿಯನ್ನು ನೀಡಿದೆ.

ಕೊಡಗು ಜಿಲ್ಲೆಯ ಕೆಲವೆಡೆ ವರುಣನ ಅಬ್ಬರ ಜೋರಾಗಿದ್ದು. ಗುಡುಗು ಸಿಡಿಲಿನೊಂದಿಗೆ ವರುಣ ಅಬ್ಬರಿಸಿದ್ದಾನೆ. ದಿಢೀರ್ ಆಗಿ ಸುರಿದ ಮಳೆಗೆ ದ್ವಿಚಕ್ರ ವಾಹನ ಸವಾರರ ಪರದಾಡುವಂತಾಯಿತು. ಮಡಿಕೇರಿ ನಗರ ಸೇರಿದಂತೆ ವಿವಿಧೆಡೆ ವರುಣನ ಅಬ್ಬರ ಜೋರಾಗಿತ್ತು.

ಹವಾಮಾನ ಇಲಾಖೆಯ ಸಿಹಿ ಸುದ್ದಿ

ಬಿಸಿಲಿನ ತಾಪಮಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಕೂಡಾ ಉಂಟಾಗಿದೆ. ಇದೀಗ ಹವಾಮಾನ ಇಲಾಖೆಯ ಸಿಹಿ ಸುದ್ದಿಯಿಂದ ಕೊಂಚ ರೀಲಿಫ್ ಸಿಕ್ಕಂತಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಭಾರಿ ಉತ್ತಮ ಮಳೆಯಾಗಲಿ ಎಂದು ಧರ್ಮಸ್ಥಳ ಮಂಜುನಾಥನಲ್ಲಿ ನಾವೂ ಕೂಡ ಪ್ರಾರ್ಥಿಸೋಣ.

Comments are closed.