ನಾಗ್ಪುರ : ಪೊಲೀಸ್ ವೃತ್ತಿಯಲ್ಲಿರುವ ತಾಯಿಗೆ ಚೀಟಿಯೊಂದರಲ್ಲಿ ಜನ್ಮದಿನದ ಶುಭಾಶಯ ಬರೆದಿಟ್ಟ ಬಳಿಕ 19ರ ಹರೆಯದ ಗೋ ಏರ್ ಖಾಸಗಿ ವಿಮಾನಯಾನ ಸಂಸ್ಥೆಯ ನೌಕರ ಮಂಥನ್ ಮಹೇಂದ್ರ ಚವಾಣ್ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮಂಥನ್ ಗೋ ಏರ್ ನಲ್ಲಿ ಟ್ರೈನೀ ramp ಆಫೀಸರ್ ಆಗಿ ದುಡಿಯುತ್ತಿದ್ದ. ನಿನ್ನೆ ಗುರುವಾರ ಮಧ್ಯಾಹ್ನ 2.45ರ ಸುಮಾರಿಗೆ ಆತ ನಾಗ್ಪುರದ ಅಜನಿ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್ರಮಣಿ ನಗರದಲ್ಲಿನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡನೆಂದು ಪೊಲಿಸರು ತಿಳಿಸಿದ್ದಾರೆ.
ಮಂಥನ್ ಡೆತ್ ನೋಟ್ ಬರೆದಿಟ್ಟಿಲ್ಲ. ಈಚೆಗೆ ಜಾಂಡೀಸ್‌ಗೆ ಗುರಿಯಾಗಿ ಹದಿನೈದು ದಿನ ರಜೆಯಲ್ಲೇ ಇದ್ದ ಆತ ಬಹುಷಃ ಕೆಲಸದ ಒತ್ತಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ, ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.