ಬೆಂಗಳೂರು: ಆಕ್ಷೇಪಾರ್ಹ ಮತ್ತು ಅಶ್ಲೀಲ ಜಾಹೀರಾತು ಬಗ್ಗೆ ಪ್ರಶ್ನಿಸಿದ್ದ ಯುವಕನಿಗೆ ಭಾರತೀಯ ರೈಲ್ವೆ ನೀಡಿದ ಉತ್ತರ ಇದೀಗ ವೈರಲ್ ಆಗಿದೆ.
ಆನಂದ ಕುಮಾರ್ ಎಂಬ ಯುವಕ ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಆ್ಯಪ್‌ನಲ್ಲಿ ನಿರಂತರವಾಗಿ ಆಕ್ಷೇಪಾರ್ಹ ಮತ್ತು ಅಶ್ಲೀಲ ಜಾಹೀರಾತುಗಳು ಬರುತ್ತಿವೆ. ಇದರಿಂದ ತುಂಬಾ ಮುಜುಗರವಾಗುತ್ತಿದೆ ಮತ್ತು ಹಿಂಸೆಯಾಗುತ್ತಿದೆ. ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ, ಐಆರ್‌ಸಿಟಿಸಿ ಕಚೇರಿ ಮತ್ತು ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಗಮನ ಹರಿಸಬೇಕು ಎಂದು ಕೋರಿ ಟ್ವೀಟ್ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಭಾರತೀಯ ರೈಲ್ವೆ, ಐಆರ್‌ಸಿಟಿಸಿ ಜಾಹೀರಾತು ನೀಡಲು ಗೂಗಲ್ ಮತ್ತು ಎಡಿಎಕ್ಸ್ ಸರ್ವಿಂಗ್ ಟೂಲ್‌ಅನ್ನು ಬಳಕೆ ಮಾಡುತ್ತದೆ. ಬಳಕೆದಾರರನ್ನು ಗುರಿಯಾಗಿಸುವ ಕುಕ್ಕೀಸ್ ಕೆಲಸ ಮಾಡುತ್ತದೆ. ಇದು ಬಳಕೆದಾರನ ಹಿಸ್ಟರಿ ಮತ್ತು ಬ್ರೌಸಿಂಗ್ ಬಿಹೇವಿಯರ್‌ಅನ್ನು ಗ್ರಹಿಸಿ ಜಾಹೀರಾತುಗಳನ್ನು ನೀಡುತ್ತದೆ. ಅಂದರೆ ಬಳಕೆದಾರ ಏನನ್ನು ಹೆಚ್ಚು ವೀಕ್ಷಿಸುತ್ತಾನೆ ಅಥವಾ ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ ಎಂಬುದನ್ನು ಬ್ರೌಸಿಂಗ್ ಹಿಸ್ಟರಿ ಮೂಲಕ ಅರ್ಥೈಸಿ ಜಾಹೀರಾತು ನೀಡುವುದಾಗಿದೆ. ಹಾಗಾಗಿ ಬ್ರೌಸರ್ ಕುಕ್ಕೀಸ್ ಮತ್ತು ಬ್ರೌಸಿಂಗ್ ಹಿಸ್ಟರಿಯನ್ನು ಕ್ಲೀನ್ ಮತ್ತು ಡಿಲೀಟ್ ಮಾಡಿ. ಮುಂದೆ ಅಂತಹ ಜಾಹೀರಾತುಗಳು ಬರುವುದಿಲ್ಲ ಎಂದು ಸಲಹೆ ನೀಡಿದೆ.
Obscene and vulgar ads are very frequently appearing on the IRCTC ticket booking app. This is very embarrassing and irritating @RailMinIndia @IRCTCofficial @PiyushGoyalOffc kindly look into. pic.twitter.com/nb3BmbztUt
— Anand Kumar (@anandk2012) May 29, 2019
ಇದೀಗ ಸಾಮಾಜಿಕ ತಾಣಗಳಲ್ಲಿ ರೈಲ್ವೆ ಇಲಾಖೆಯ ಟ್ವೀಟ್ ವೈರಲ್ ಆಗಿದ್ದು, ಚಪ್ಪಲಿ ಕೊಟ್ಟು ಹೊಡೆಸಿಕೊಂಡ ಅನುಭವ ಆನಂದ್ ಕುಮಾರ್‌ಗೆ ಆಗಿದೆ ಎಂದು ಮೇಮ್ಸ್, ಟ್ರೋಲ್‌ಗಳು ಹರಿದಾಡುತ್ತಿವೆ.