ಕರ್ನಾಟಕ

ಜನತಾ ದಳವನ್ನು ಮುಗಿಸಿದಿರಿ. ಕಾಂಗ್ರೆಸ್ ನ್ನ ಒಂದೇ ಸ್ಥಾನಕ್ಕೆ ಇಳಿಸಿದಿರಿ: ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆ

Pinterest LinkedIn Tumblr


ಬೆಂಗಳೂರು(ಮೇ 27): ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬಿಜೆಪಿಯ ಗುರಿಗೆ ಸಿದ್ದರಾಮಯ್ಯ ಸಹಾಯಕವಾಗಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ಇವತ್ತು ಕರ್ನಾಟಕದಲ್ಲಿ ಒಂದು ಸ್ಥಾನಕ್ಕೆ ಇಳಿದಿದೆ ಎಂದು ಶೋಭಾ ಟೀಕಿಸಿದರು.

“ನೀವು ಜನತಾ ದಳ ಪಕ್ಷವನ್ನು ಮುಗಿಸಿದಿರಿ. ಹಳೆಯದಾದ ಕಾಂಗ್ರೆಸ್ ಪಕ್ಷವನ್ನ ರಾಜ್ಯದಲ್ಲಿ ಒಂದೇ ಸ್ಥಾನಕ್ಕೆ ಇಳಿಸಿದಿರಿ. ಈಗ ನಿಮ್ಮ ಸ್ವಾರ್ಥ ಹಾಗೂ ಅಹಂಕಾರದಿಂದ ಕಾಂಗ್ರೆಸ್-ಜನತಾದಳ ಸರ್ಕಾರಕ್ಕೆ ಹಾನಿ ಮಾಡುತ್ತಿದ್ದೀರಿ” ಎಂದು ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, “ಕಾಂಗ್ರೆಸ್ ಮುಕ್ತರಾಗುವ ನಮ್ಮ ಪ್ರಯತ್ನಗಳಿಗೆ ನೀವು ಸಹಾಯಕವಾಗಿದ್ದಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ನಿಮ್ಮಂಥ ಹೆಚ್ಚೆಚ್ಚು ಜನರು ಕಾಂಗ್ರೆಸ್ ಪಕ್ಷ ಸೇರುವಂತಾಗಲಿ” ಎಂದು ವ್ಯಂಗ್ಯ ಮಾಡಿದರು.

ಬಿಜೆಪಿಗೆ ಸಂಖ್ಯಾಬಲ ಇಲ್ಲದಿದದರೂ ಸರಕಾರ ರಚಿಸುವುದಾಗಿ ಹೇಳುತ್ತದೆ. ಇದೇನೂ ಹೊಸ ಡ್ರಾಮಾವಲ್ಲ ಎಂದು ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಟ್ವಿಟ್ಟರ್​ನಲ್ಲಿ ಟೀಕಿಸಿದ್ದಕ್ಕೆ ಶೋಭಾ ಕರಂದ್ಲಾಜೆ ಈ ರೀತಿ ತಿರುಗೇಟು ನೀಡಿದ್ದಾರೆ.

“ಜೂನ್ 1ರೊಳಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಈ ಬಾರಿಯೂ ಅವರಿಂದ ಸರಕಾರ ರಚನೆ ಮಾಡಲು ಸಾಧ್ಯವಾಗದಿದ್ದರೆ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದೇ ಸೂಕ್ತ” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

“ರಮೇಶ್ ಜಾರಕಿಹೊಳಿ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಪಕ್ಷ ತೊರೆಯುವುದಿಲ್ಲ. ಕಳೆದ ಒಂದು ವರ್ಷದಿಂದ ಸರಕಾರ ಬೀಳುತ್ತೆ ಎಂದು ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ. ಇನ್ನೂ 4 ವರ್ಷ ಅದೇ ಮಾತು ಹೇಳುತ್ತಲೇ ಇರುತ್ತಾರೆ. ಸರಕಾರ ಮಾತ್ರ ಸುಭದ್ರವಾಗಿರುವ ಭರವಸೆ ಇದೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಆಪರೇಷನ್ ಕಮಲದ ಪ್ರಯತ್ನವನ್ನು ಟೀಕಿಸಿರುವ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು ರಾಜ್ಯದ ಸರಕಾರ ಬೀಳಿಸಲೆಂದಲ್. ವಿಧಾನಸಭೆಯನ್ನ ವಿಸರ್ಜಿಸಬೇಕೆಂದು ಬಿಜೆಪಿ ಹೇಳುವುದು ನಾನ್​ಸೆನ್ಸ್ ಎಂದು ಟೀಕಿಸಿದ್ದಾರೆ.

Comments are closed.