ಕರ್ನಾಟಕ

ಆಪರೇಷನ್‌ ಕಮಲಕ್ಕೆ ಬದಲಾಗಿ ಜನಾದೇಶಕ್ಕೆ ಬಿಜೆಪಿ ಒಲವು: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ”ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌-ಬಿಜೆಪಿ ಮೈತ್ರಿ ಕೂಟ ಒಂದೋ ರಾಜೀನಾಮೆ ನೀಡಬೇಕು, ಇಲ್ಲವೇ ವಿಧಾನಸಭೆ ವಿಸರ್ಜಿಸಬೇಕು. ಮತ್ತೊಮ್ಮೆ ಚುನಾವಣೆ ಎದುರಿಸಲು ಪಕ್ಷ ರೆಡಿಯಾಗಿದೆ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

‘ವಿಜಯ ಕರ್ನಾಟಕ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಚುನಾವಣೆ ಎದುರಿಸುವ ವಿಚಾರಕ್ಕೇ ಹೆಚ್ಚು ಒತ್ತು ನೀಡಿದ್ದಾರೆ. ಚುನಾವಣೆ ಬಳಿಕ ಮಿತ್ರ ಪಕ್ಷಗಳ ಜಗಳದಿಂದ ಸರಕಾರ ಉರುಳಲಿದೆ ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಈ ಹಂತದಲ್ಲಿ ಆಪರೇಷನ್‌ ಕಮಲದ ಹಂಗಿಲ್ಲದೆ ಹೊಸ ಚುನಾವಣೆ ಎದುರಿಸುವ ಬಿಎಸ್‌ವೈ ಇಂಗಿತ ಕುತೂಹಲ ಮೂಡಿಸಿದೆ.

ಬಿಎಸ್‌ವೈ ಮಾತಿನ ಮರ್ಮವೇನು?

* ಈ ಹಂತದಲ್ಲೇ ಚುನಾವಣೆಗೆ ಹೋದರೆ ಭರ್ಜರಿ ಬಹುಮತ ಪಡೆಯುವ ಲೆಕ್ಕಾಚಾರ.

* ರಾಷ್ಟ್ರೀಯ ನಾಯಕರು ಮರಳಿ ಜನಾದೇಶವೇ ಉತ್ತಮ ಎಂದು ಹೇಳಿರಬಹುದು.

* ಮತ್ತೆ ಚುನಾವಣೆ ಎದುರಿಸುವ ಆತಂಕದಿಂದ ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ತಾವಾಗಿಯೇ ಬಿಜೆಪಿಗೆ ಬರಲಿ ಎಂಬ ಒತ್ತಡ ತಂತ್ರ?

ಆಪರೇಷನ್‌ಗೆ ಆಸಕ್ತಿ ಇಲ್ಲ

ಮಂಡ್ಯ ಕ್ಷೇತ್ರದಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಭಾನುವಾರ ಬಿಜೆಪಿ ನಾಯಕ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Comments are closed.