ಕರ್ನಾಟಕ

ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಮಾಸ್ಟರ್‌ ಪ್ಲಾನ್‌

Pinterest LinkedIn Tumblr


ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಗೆ ಬಲ ಬಂದಿದ್ದರೆ, ದೋಸ್ತಿ ನಾಯಕರಿಗೆ ಮಾತ್ರ ನಡುಕ ಶುರುವಾಗಿದೆ. ಆಪರೇಷನ್ ಕಮಲದಿಂದ ಹೇಗೆ ಸರ್ಕಾರ ರಕ್ಷಣೆ ಮಾಡಿಕೊಳ್ಳುವುದು ಎಂಬ ಚಿಂತೆ ಹೆಚ್ಚಾಗಿದೆ.

ಡಿಸಿಎಂ ಪರಮೇಶ್ವರ್‌ ಮನೆಯಲ್ಲಿ ಕಾಂಗ್ರೆಸ್​ ಸಚಿವರ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಮೈತ್ರಿಯಿಂದಾಗಿಯೇ ನಾವು ಪಕ್ಷ ಕಳೆದುಕೊಳ್ಳಬೇಕಾಗಿ ಬಂದಿತೆಂದು ಅಪಸ್ವರ ಎತ್ತಿದ್ರೂ, ಮೈತ್ರಿಯಿಂದ ಹೊರಬರುವ ತೀರ್ಮಾನ ತೆಗೆದುಕೊಳ್ಳಲಿಲ್ಲ. ಮೈತ್ರಿ ಮುರಿದುಕೊಂಡು ಹೊರಬಂದರೆ ಅದರ ಲಾಭಕ್ಕಿಂತ ನಷ್ಟವೇ ಅಧಿಕ ಅಂತ ಅರಿತು ಕೊನೆಗೆ ಕುಮಾರಸ್ವಾಮಿ ನೇತೃತ್ವದಲ್ಲೇ ಮುಂದುವರಿಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯ್ತು.

ಪರಮೇಶ್ವರ್ ಮನೆಯ ಬಳಿಕ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅನೌಪಚಾರಿಕ ಸಚಿವ ಸಂಪುಟ ಸಭೆ ನಡೆಯಿತು. ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋಲಿನ ಪರಾಮರ್ಶೆ ಮಾಡಿಕೊಳ್ಳಲಾಯ್ತು. ಮತಯಂತ್ರಗಳ ಹ್ಯಾಕ್‌ ಬಗ್ಗೆಯೂ ಪ್ರಸ್ತಾಪವಾಯ್ತು. ಹಾಗೆ ಆಪರೇಷನ್ ಕಮಲದ ಬಗ್ಗೆಯೂ ಸಮಾಲೋಚನೆ ನಡೆಸಲಾಯ್ತು.

Comments are closed.