ಕರ್ನಾಟಕ

ಯುವಕನ ಬಲಿ ಪಡೆದ ಫೇಸ್​​ಬುಕ್​ನಲ್ಲಿ ವೈರಲ್ ಆದ ದೃಶ್ಯಗಳು?

Pinterest LinkedIn Tumblr


ಮೈಸೂರು: ಪ್ರೇಮಿಗಳ ಆಕ್ಷೇಪಾರ್ಹ ವಿಡಿಯೋ ಫೇಸ್​ಬುಕ್​ನಲ್ಲಿ ಆಪ್ ಲೋಡ್ ಆದ ಕಾರಣ ಅವಮಾನಕ್ಕೆ ಅಂಜಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ನಂಜನಗೂಡಿನ ಮಲ್ಲುಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಅತಿಯಾಗಿ ಮಾತ್ರೆ ಸೇವಿಸಿ ಗಿರೀಶ್ ಆತ್ಮಹತ್ಯೆಗೆ ಶರಣಗಿದ್ದಾನೆ ಎಂದು ಹೇಳಲಾಗುತ್ತಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಗಿರೀಶ್, ಕಾರ್ಯ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ.

ಆಕ್ಷೇಪಾರ್ಹ ವಿಡಿಯೋವನ್ನು ಪ್ರೇಮಿಗಳೇ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯುವತಿ ವಿವಸ್ತ್ರವಾಗಿ ತೆಗೆದ ಸೆಲ್ಫಿ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿ ವೈರಲ್​ ಆಗುತ್ತಿದ್ದಂತೆ ಹೆದರಿದ ಗಿರೀಶ್​ ಅತಿಯಾಗಿ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಗಿರೀಶ್ ಸಾವಿನ ನಂತರ ಯುವತಿ ಗ್ರಾಮದಿಂದ ಕಾಣೆಯಾಗಿದ್ದು, ಇನ್ನೂ ಪೋಷಕರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಎಂದು ಕಾರಣ ಹೇಳುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

Comments are closed.