ರಾಷ್ಟ್ರೀಯ

ಈ ಕಾರಿನ ಮೇಲೆ ಲೇಪನ ಮಾಡಿದ್ದು ಏನು ಗೊತ್ತಾ?

Pinterest LinkedIn Tumblr


ಅಹಮದಬಾದ್: ಸಾಮಾನ್ಯವಾಗಿ ಹಸುವಿನ ಸಗಣಿಯನ್ನು ಮನೆಯ ನೆಲಕ್ಕೆ ಬಳಸೋದು ನೋಡಿದ್ದೇವೆ ಜೊತೆಗೆ ಮನೆಯ ಗೋಡೆಗಳಿಗೂ ಸಹ ಇದನ್ನು ಬಳಕೆ ಮಾಡಿರೋದು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಮಹಿಳೆ ತಮ್ಮ ಕಾರಿನ ಮೇಲ್ಮೈಗೆ ಹಸುವಿನ ಸಗಣಿಯನ್ನು ಸಿಂಪಡಿಸಿ ರಸ್ತೆ ಮೇಲೆ ಕಾರನ್ನು ಚಾಲಾಯಿಸಿರುವ ಪೋಟೋ ಅಂತರ್ಜಲದಲ್ಲಿ ಸಖತ್ ವೈರಲ್ ಆಗಿದೆ.

ಗುಜರಾತಿನ ಅಹಮದಬಾದ್​ನ ಸೀಜಾಲ್ ಷಾ ಎಂಬ ಮಹಿಳೆ ತಮ್ಮ ಟಯೋಟಾ ಕಾರಿನ ಹೊರ ಮೈ ಭಾಗಕ್ಕೆ ಸಗಣಿಯನ್ನು ಲೇಪನ ಮಾಡಿಕೊಂಡಿದ್ದು ಬೇಸಿಗೆಯಲ್ಲಿ ಕಾರನ್ನು ತಣ್ಣಗೆ ಇಡುವಂತೆ ಮಾಡಲು ಈ ರೀತಿಯಾಗಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ರೀತಿಯಿಂದಾಗಿ ಕಾರಿನಲ್ಲಿ ಏಸಿ ಬಳಸುವ ಅಗತ್ಯವಿಲ್ಲ ಜೊತೆಗೆ ಪರಿಸರದ ಕಾಳಜಿಯ ದೃಷ್ಠಿಯಿಂದ ಇದು ಉತ್ತಮವಾಗಿದ್ದು, ಮಾಲಿನ್ಯ ಸಹ ತಡೆಯಬಹುದು ಎಂದಿದ್ದಾರೆ.

ತಮ್ಮ ಕಾರಿನ ಮೇಲೆ ಸಗಣಿ ಮಾತ್ರ ಲೇಪನ ಮಾಡಿಲ್ಲ ಜೊತೆಗೆ ಕಾರಿನ ಹಂಚಿನಲ್ಲಿ ರಂಗೋಲಿ ಸಹ ಬಿಡಿಸಿ ಕಾರಿಗೆ ಹೊಸ ವಿನ್ಯಾಸವನ್ನು ಸಹ ಕೊಟ್ಟಿದ್ದಾರೆ. ಈ ದೃಶ್ಯ ಸ್ಥಳೀಯ ಕಣ್ಣಿಗೆ ಬೀಳುತ್ತಿದಂತೆ ಆ ಕಾರಿನ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

‘ನನಗೆ ಈ ರೀತಿ ಮಾಡಲು ಯೋಚನೆ ಬಂದಿದ್ದು ನಮ್ಮ ಮನೆಯಲ್ಲಿ ಮೇಲೆ ಮತ್ತು ಗೋಡೆಗಳಲ್ಲಿ ಸಗಣಿಯನ್ನು ಬಳಸಿದ್ದೇನೆ. ಈ ರೀತಿ ಮಾಡಿರುವುದ್ದರಿಂದ ನಮ್ಮ ಮನೆ ಸಖತ್​ ತಣ್ಣಾಗಿದೆ. ಇದಾದ್ಮೇಲೆ ನನ್ನ ಕಾರಿನಲ್ ಇದನ್ನು ಪ್ರಯೋಗ ಮಾಡಿದ್ದೇನೆ’ ಎಂದು ಅವರು ಎಎನ್​ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

Comments are closed.