ಕರ್ನಾಟಕ

ನಿಖಿಲ್ ಕುಡಿದು ರಂಪಾಟ: ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಬಗ್ಗೆ ಸಿಎಂ ಎಚ್ಡಿಕೆ ಹೇಳಿದ್ದೇನು ಗೊತ್ತಾ?

Pinterest LinkedIn Tumblr

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಎದುರು ಸೋಲನುಭವಿಸಿದ ಬೇಸರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮೈಸೂರಿನ ಹೋಟೆಲ್​ ಒಂದರಲ್ಲಿ ಕುಡಿದು ರಂಪಾಟ ಮಾಡಿದ್ದರು ಎಂದು ಕನ್ನಡ ದಿನಪತ್ರಿಕೆಯೊಂದು ಶನಿವಾರ ಸುದ್ದಿ ಪ್ರಕಟಿಸಿದ್ದು ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಕಪೋಲಕಲ್ಪಿತ ಎಂದು ನಿಖಿಲ್ ತಂದೆ ಹಾಗೂ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ಲೀಟ್ ಮಾಡಿರುವ ಅವರು, ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ. ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ. ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ,” ಎಂದಿದ್ದಾರೆ.

ಚುನಾವಣೆಯಲ್ಲಿ ಸೋತ ನಂತರ ನಿಖಿಲ್​ ಮೈಸೂರಿನ ರ್‍ಯಾಡಿಸನ್​​ ಬ್ಲೂ ಹೋಟೆಲ್​ನಲ್ಲಿ ತಂಗಿದ್ದರು. ಸೋಲಿನ ಬೇಸರದಿಂದ ಅವರು ಕುಡಿದು ಜೋರಾಗಿ ಗಲಾಟೆ-ರಂಪಾಟ ಮಾಡಿದ್ದರು. ಈ ವೇಳೆ ಹೋಟೆಲ್​ ಮ್ಯಾನೇಜರ್​ ಹಾಗೂ ಸಿಬ್ಬಂದಿ ಸಮಾಧಾನ ಪಡಿಸಿದರೂ ಅವರ ವಿರುದ್ಧವೂ ವಾಗ್ದಾಳಿ ನಡೆಸಿ ಗಲಾಟೆ ಮಾಡಿದ್ದರು.​ ಅಜ್ಜ ದೇವೇಗೌಡರ ವಿರುದ್ಧವೂ ಅವರು ಕೂಗಾಡಿದ್ದರು- ಎಂಬುದಾಗಿ ಕನ್ನಡ ದಿನಪತ್ರಿಕೆ ವರದಿ ಪ್ರಕಟಿಸಿತ್ತು. ಪತ್ರಿಕೆಯ ಕಟ್ಟಿಂಗ್ ಬೆಳಿಗ್ಗೆನಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Comments are closed.