ಉತ್ತರಕನ್ನಡ ಲೋಕಸಭಾ ಕ್ಷೇತದಿಂದ ಅನಂತಕುಮಾರ ಹೆಗಡೆ ಆರನೇ ಭಾರಿ ಗೆದ್ದು ಸಂಸತ್ತು ಪ್ರವೇಶ ಮಾಡಿದ್ದಾರೆ. ಈ ಭಾರಿ ಅನಂತಕುಮಾರ ಹೆಗಡೆ ಅವರ ಗೆಲುವಿಗೆ ಕಾರವಾರ ಭಾಗದ ಜನರ ಕೊಡುಗೆಯೂ ಇದೆ.
ಕಾರವಾರದ ಜನರ ಹೆಚ್ಚಿನ ಪ್ರೋತ್ಸಾಹಕ್ಕೆ ಕಾರಣ ಶಾಸಕಿ ರೂಪಾಲಿ ನಾಯ್ಕ. ಕಾರವಾರ ಶಾಸಕಿ ರೂಪಾಲಿ ನಾಯ್ಕ ತನ್ನ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮವಹಿಸುವ ಮೂಲಕ ಅನಂತಕುಮಾರ ಅವರಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತ ಸಿಗುವಂತೆ ಮಾಡಿದ್ದಾರೆ.
ಹೆಗಡೆ ಅವರು ಜಯಗಳಿಸಿದ ಹಿನ್ನಲೆಯಲ್ಲಿ ಕಾರವಾರ ನಗರಸಲ್ಲಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ್ರು. ಈ ವೇಳೆ ನಗರಸಲ್ಲಿ ಮೆರವಣಿಗೆ ನಡೆಸಿದ ಬಿಜೆಪಿಗರು ಡೊಳ್ಳು ಕುಣಿತದೊಂದಿಗೆ ಹೆಜ್ಜೆ ಹಾಕೋ ಮೂಲಕ ಸಂಭ್ರಮಿಸಿದ್ರು. ಇನ್ನೂ ಇದೆ ವೇಳೆ ಶಾಸಕಿ ರೂಪಾಲಿ ನಾಯ್ಕ ಸಹ ಕಾರ್ಯಕರ್ತರೊಂದಿಗೆ ಕೈ ಜೋಡಿಸಿ ಹೆಜ್ಜೆ ಹಾಕುತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ರು.
Comments are closed.