ಕರ್ನಾಟಕ

ನೂತನ ಸಂಸದ ತೇಜಸ್ವಿಸೂರ್ಯ ಗೆದ್ದ ಬಳಿಕ ಮಾಡಿದ ಮೊದಲ ಕೆಲಸ ಏನು ಗೊತ್ತಾ?!

Pinterest LinkedIn Tumblr


ಅನುಭವಿ ನಾಯಕ ಹಾಗೂ ಹೊಸಮುಖದ ನಡುವಿನ ಜಿದ್ದಾಜಿದ್ದಿನ ಕಣವಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಯುವಸಂಸದ ತೇಜಸ್ವಿ ಸೂರ್ಯ, ಗೆಲುವಿನ ಮೊದಲ ದಿನವೇ ಡಾ.ಅಂಬೇಡ್ಕರ್​ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನೂತನ ಸಂಸದ ತೇಜಸ್ವಿಸೂರ್ಯ, ಬಳಿಕ ಟ್ವೀಟ್ ಮಾಡಿದ್ದು, ಸಂಸದನಾಗಿ ನನ್ನ ಮೊದಲ ಕೆಲಸ ನನ್ನ ಬಾಲ್ಯದ ಹೀರೋ ಬಾಬಾಸಾಹೇಬ್ ಅಂಬೇಡ್ಕರ್​ಗೆ ಪ್ರಣಾಮ ಮಾಡುವುದು.

ಏನು ಇಲ್ಲದೇ ಜನಿಸಿದ ಅಂಬೇಡ್ಕರ್, ಭಾರತದ ದೊಡ್ಡ ನಾಯಕರಾಗಿ, ವಿಧ್ವಾಂಸರಾಗಿ ಬೆಳೆದರು. ಎಲ್ಲರಿಗೂ ಅವರು ಸ್ಪೂರ್ತಿ. ಅವರ ಭವ್ಯ ಸಂವಿಧಾನಕ್ಕೆ ಹೊಸ ಶಕ್ತಿ ತುಂಬೋಣ ಎಂದು ಬರೆದುಕೊಂಡಿದ್ದಾರೆ. ಚುನಾವಣೆ ವೇಳೆ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರು, ತೇಜಸ್ವಿ ಸೂರ್ಯ, ಅಂಬೇಡ್ಕರ್​ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಆದರೆ ತಮ್ಮ ಮೇಲಿನ ಆರೋಪಗಳಿಗೆ ಕೊನೆ ಹಾಡಿದ ತೇಜಸ್ವಿಸೂರ್ಯ ಗೆದ್ದ ಮೊದಲ ದಿನವೇ ಅಂಬೇಡ್ಕರ್​ಗೆ ನಮಿಸುವ ಮೂಲಕ ತಮ್ಮ ಶೃದ್ಧೆ ವ್ಯಕ್ತಪಡಿಸಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ತೇಜಸ್ವಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.

Comments are closed.