ಕರ್ನಾಟಕ

ನಾಯ್ಡು ಭೇಟಿ ಬಳಿಕ ದೇವೇಗೌಡರು ಹೇಳಿದ್ದೇನು ಗೊತ್ತಾ..?

Pinterest LinkedIn Tumblr


ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿಳೋದಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ. ಹೀಗಾಗಿ ಅಧಿಕಾರ ಗದ್ದುಗೆಗೇರಲು ಮಹಾಘಟಬಂದನ್ ನಾಯಕರು, ಅಂತಿಮ ಕಸರತ್ತು ನಡೆಸ್ತಿದ್ದಾರೆ.

ಮಹಾಘಟಬಂದನ್ ಮುಂದಾಳತ್ವ ವಹಿಸಿಕೊಂಡಿರುವ ಆಂಧ್ರ ಸಿಎಂ ಚಂದ್ರಬಾಬುನಾಯ್ಡು, ಬೆಂಗಳೂರಿನ ಪದ್ಮನಾಭನಗರ ನಿವಾಸಕ್ಕೆ ತೆರಳಿ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ, ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಚರ್ಚಿಸಿದರು.

ಎಕ್ಸಿಟ್‌ ಪೋಲ್‌, ಚುನಾವಣಾ ಫಲಿತಾಂಶ , ಪ್ರಮುಖವಾಗಿ ವಿಎಎಂ ಟ್ಯಾಂಪರಿಂಗ್ , ಮತಯಂತ್ರ ದೋಷ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮಹಾಘಟಬಂದನ್ ರೂಪುರೇಷೆಗಳು, ಸರ್ಕಾರ ರಚಿಸುವ ಅವಕಾಶ ಸಿಕ್ಕರೆ ಏನು ಮಾಡಬೇಕು ಎಂಬ ವಿಷಯಗಳ ಕುರಿತು ಚರ್ಚೆ ನಡೆಸಿದರು.

ರಾಹುಲ್ ಗಾಂಧಿ ಮಹಾಘಟಬಂದನ್ ಪ್ರಧಾನಿ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಮುಗುಳ್ನಗುತ್ತಲೇ ಜಾರಿಕೊಂಡರು. ಚುನಾವಣಾ ಫಲಿತಾಂಶ ಬರಲಿ ನಂತರ ಎಲ್ಲಾ ಮುಖಂಡರು ತೀರ್ಮಾನಿಸಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದರು.

Comments are closed.