ಮಂಡ್ಯ: ಲೋಕಸಭೆ ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯ ಅಭಿಮಾನಿಗಳು ಗೆಲುವಿಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ನಿಖಿಲ್ ಅಭಿಮಾನಿಯಾದ ಕ್ಯಾತನಹಳ್ಳಿ ಗ್ರಾಮದ ಗವಿಗೌಡ ಪ್ರವೀಣ್ ಎಂಬುವವರು ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾ ದೇವಿಗೆ ಹರಕೆ ಹೊತ್ತಿದ್ದರು ಅದೇ ರೀತಿಯಲ್ಲಿ ಇಂದು ಹರಕೆ ತೀರಿಸುವ ಸಂದರ್ಭದಲ್ಲಿ ದೇವರ ತೀರ್ಥ ಹಾಕಿದಾಗ ಮೇಕೆ ಮೈ ಒದರಿರುವ ಘಟನೆ ನಡೆದಿದೆ. ಮೈ ಒದರಿದರೆ ಹರಕೆ ಈಡೇರುತ್ತೆ ಎಂಬುದು ಇಲ್ಲಿನ ಜನರ ನಂಬಿಕೆ. ಅದೇ ರೀತಿಯಲ್ಲಿ ತೀರ್ಥ ಹಾಕಿದ ತಕ್ಷಣ ಮೇಕೆ ತನ್ನ ದೇಹ ಅಲುಗಾಡಿಸುವ ಮೂಲಕ ಗೆಲುವಿನ ಸೂಚನೆ ನೀಡಿದೆ.
ಇನ್ನೂ ಮೇಕೆ ನಿಖಿಲ್ ಗೆಲುವಿನ ಸೂಚನೆ ನೀಡಿದ್ದರಿಂದ ಸಂಭ್ರಮಿಸಿದ ನಿಖಿಲ್ ಅಭಿಮಾನಿಗಳು ದೇವರಿಗೆ ಉರುಳು ಸೇವೆ ಮಾಡಿದರು. ಸಮೀಕ್ಷೆಯ ಪ್ರಕಾರ 10 ಸಮೀಕ್ಷೆ ಪೈಕಿ 6 ರಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಎಂದು ಬಂದಿದೆ ಹೀಗಾಗಿ ಗೆಲುವು ನಮ್ಮದೇ ಎಂದು ಸಂಭ್ರಮಪಟ್ಟರು.