ಕುಂದಗೋಳ/ಚಿಂಚೋಳಿ: ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಕಣಗಳಾಗಿದ್ದ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಮತದಾನ ಅಂತ್ಯವಾಗಿದೆ. ಕುಂದಗೋಳದಲ್ಲಿ ಶೇ.82.42 ಮತ್ತು ಚಿಂಚೋಳಿಯಲ್ಲಿ ಶೇ.70.75 ರಷ್ಟು ಮತದಾನವಾಗಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,56,128 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಾಜಿ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‍ನಿಂದ ಕುಸುಮಾ ಶಿವಳ್ಳಿ, ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ ಸೇರಿದಂತೆ 8 ಜನ ಸ್ಪರ್ಧೆಯಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಶೇ.79.9ರಷ್ಟು ಮತದಾನವಾಗಿತ್ತು.
ಮತದಾರರು (2018ರ ಪ್ರಕಾರ)
ಒಟ್ಟು ಮತದಾರರು: 1,84,730
ಪುರುಷ ಮತದಾರರು: 95,628
ಮಹಿಳಾ ಮತದಾರರು: 89,102
ಇತ್ತ ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಮತದಾನ ನಡೆದಿದ್ದು, ಶೇ70.75ರಷ್ಟು ಜನ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿ ಒಟ್ಟು 17 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಮತ್ತು ಬಿಜೆಪಿಯಿಂದ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. 2018ರ ಚುನಾವಣೆಯಲ್ಲಿ ಶೇ.69.6ರಷ್ಟು ಮತದಾನವಾಗಿತ್ತು.
ಮತದಾರರು (2018ರ ಪ್ರಕಾರ)
ಒಟ್ಟು ಮತದಾರರು: 1,90,976
ಪುರುಷ ಮತದಾರರು: 97,243
ಮಹಿಳಾ ಮತದಾರರು: 93,718