ಬೆಂಗಳೂರು: ಉಕ್ಕಿನ ಮಹಿಳೆ ಎಂದೇ ಖ್ಯಾತವಾಗಿರುವ ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಇರೋಮ್ ಶರ್ಮಿಳಾ ಬೆಳಗ್ಗೆ 9.21 ಕ್ಕೆ ಮಲ್ಲೇಶ್ವರಂ ನ ಕ್ಲೌಡ್ ನೈನ್ ನಲ್ಲಿ ಸಿ ಸೆಕ್ಷನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಮಣಿಪುರದ ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊರನ್ನು 2017 ರಂದು ವಿವಾಹ ವಾಗಿದ್ದರು. ಕುಟಿನ್ಹೊ ಬ್ರಿಟಿಷ್ ನಾಗರೀಕರಾಗಿದ್ದು ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಇರೋಮ್ ಶರ್ಮಿಳಾರನ್ನು ಮದುವೆಯಾಗಿದ್ದರು. ಆಗ ಉಪ ನೋಂದಣಾಧಿಕಾರಿ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ಕುಟಿನ್ಹೊ ಶರ್ಮಿಳಾ ಅವರಿಗೆ ಉಂಗುರ ತೊಡಿಸಿದ್ದರು.
ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ – ಅಫ್ಸಾ) ವಿರುದ್ಧ ಸತತ 16 ವರ್ಷಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕೊನೆಗೆ ಕಳೆದ ವರ್ಷ ಆಗಸ್ಟ್ 9ರಂದು ತಮ್ಮ ಉಪವಾಸ ಅಂತ್ಯಗೊಳಿಸಿ ಚುನಾವಣೆಗೆ ನಿಂತಿದ್ದರು. ಆದರೆ ಕೇವಲ 90 ಮತಗಳನ್ನು ಪಡೆದು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ಅದಾದ ಬಳಿಕ ಅವರು ರಾಜಕೀಯದಿಂದಲೇ ಬಹುತೇಕ ವಿಮುಖರಾಗಿದ್ದಾರೆ.
Comments are closed.