ಕರ್ನಾಟಕ

ಹಾಸನದಲ್ಲಿ ಗೋಲಿಬಾರ್ ಆದರೆ ಜಿಲ್ಲಾಧಿಕಾರಿ ಕಾರಣವೆಂದು ರೇವಣ್ಣ ಹೇಳಿಕೆಗೆ ಖಡಕ್ ತಿರುಗೇಟು

Pinterest LinkedIn Tumblr


ಹಾಸನ: ಹಾಸನದಲ್ಲಿ ಗೋಲಿಬಾರ್ ಆದ್ರೆ ಅದಕ್ಕೆ ಡಿಸಿ ಪ್ರಿಯಾಂಕಾ ಮೇರಿ ಕಾರಣವೆಂದು ಸಚಿವ ರೇವಣ್ಣ ಹೇಳಿದ್ದು, ಇದಕ್ಕೆ ಡಿಸಿ ಪ್ರಿಯಾಂಕಾ ಮೇರಿ ತಿರುಗೇಟು ನೀಡಿದ್ದು, ನಾವೆಲ್ಲಾ ಕೆಲಸ ಮಾಡಿದ್ದೇವೆ. ಸಚಿವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬರ ಸರಿಯಾಗಿ ನಿರ್ವಹಿಸಬೇಕು. ಜಿಲ್ಲಾಧಿಕಾರಿ ಬರ ನಿರ್ವಹಿಸದಿದ್ದಲ್ಲಿ ಗೋಲಿಬಾರ್ ಆಗಿ, ಹೆಚ್ಚು ಕಡಿಮೆಯಾದ್ರೆ ಡಿಸಿ ನೇರ ಹೊಣೆಯಾಗ್ತಾರೆ ಎಂದು ರೇವಣ್ಣ ವಾಗ್ದಾಳಿ ನಡೆಸಿದ್ದರು. ಅಲ್ಲದೇ, ಆಲೂಗಡ್ಡೆ ಸರಿಯಾಗಿ ರೈತರಿಗೆ ನೀಡುತ್ತಿಲ್ಲಾ, ಹಳೆ ಜಿಲ್ಲಾಧಿಕಾರಿಗಳು ಯಾವ ರೀತಿ ಕೆಲಸ ಮಾಡಿದ್ದಾರೆ ಅನ್ನೋದನ್ನು ಮೊದಲು ಕಲಿತುಕೊಳ್ಳಬೇಕು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಪ್ರಿಯಾಂಕಾ, ಈಗಾಗಲೇ ತಾಲೂಕಿನ ತಹಶೀಲ್ದಾರ್ ಅಕೌಂಟ್ಗೆ ಹಣ ಹಾಕಿದ್ದೇವೆ. ಅರಸೀಕೆರೆ, ಬೇಲೂರು ತಾಲೂಕಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಎಸಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದ್ದೇವೆ. ಆಲೂಗಡ್ಡೆ ಬೆಳೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ ಮಾತನಾಡಿದ್ದೇನೆ. ಅಧಿಕಾರಿಗಳು ಹಾಗೂ ರೈತರ ಜೊತೆ ಮಾತನಾಡಿದ್ದೇನೆ. ಗರಿಷ್ಠ ಮಿತಿಯಲ್ಲಿ ಮಾರಾಟ ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇವೆ.

ರೈತರರನ್ನು ಕರೆದು ಮೀಟಿಂಗ್ ಮಾಡಿದ್ದೇವೆ. ಮಳೆ ಆದ ಕೊಡಲೇ ಆಲೂಗಡ್ಡೆ ಕೊಡಲಾಗುವುದು, ಇದರಿಂದ ರೈತರು ಯಾವುದೇ ಸಮಸ್ಯೆ ಹೇಳಿಕೊಂಡಿಲ್ಲ, ಯಾವ ಅರ್ಥದಲ್ಲಿ ಸಚಿವರು ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

Comments are closed.