ಕರ್ನಾಟಕ

ಶಂಕಿತ ವ್ಯಕ್ತಿ ರಾಜಧಾನಿಗೆ ನುಸುಳಿರುವ ಕುರಿತು ರವಿ ಚೆನ್ನಣ್ಣನವರ್ ಹೇಳುವುದೇನು?

Pinterest LinkedIn Tumblr


ಬೆಂಗಳೂರಿಗೆ ಶಂಕಿತ ವ್ಯಕ್ತಿ ಬಂದಿಲ್ಲಾ ಎಂದು ಹೇಳ್ತಿದ್ದ ಗೃಹ ಇಲಾಖೆ ಇಂದು ಹೌದು ಎಂದಿದೆ. ಮಾಧ್ಯಮವೊಂದರ ಖಚಿತ ಮಾಹಿತಿ ಅಲ್ಲಗಳೆಯಲಾಗದ ಗೃಹ ಇಲಾಖೆ ಮತ್ತು ಪೊಲೀಸರು ಶಂಕಿತ ವ್ಯಕ್ತಿಯ ಹುಡುಕಾಟ ನಡೆಸಿರೋದು ಸತ್ಯ ಎಂದು ಒಪ್ಪಿಕೊಂಡಿದೆ.

ನಿನ್ನೆ ರಾತ್ರಿ 7.30ಕ್ಕೆ ನಡೆದ ಘಟನೆ ಇಡೀ ಪೊಲೀಸ್ ಇಲಾಖೆ ಅಲರ್ಟ್ ಆಗುವಂತೆ ಮಾಡಿದೆ. ಕಾಟಾಚಾರಕ್ಕೆ ಶ್ವಾನ ದಳ ಬಾಂಬ್ ನಿಷ್ಕ್ರಿಯ ದಳ ಕರೆಸಿ ತಪಾಸಣೆ ಮಾಡಿದ್ದ ಪೊಲೀಸ್ ಇಲಾಖೆ, ಇಂದು ಆ ಶಂಕಿತನ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಲು ಪ್ರಾರಂಭ ಮಾಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ನಿಮ್ಮ ಮಾಧ್ಯಮವೊಂದು ಮಾಡಿದ ಒಂದು ಮೆಗಾ ಎಕ್ಸ್ಲೂಸೀವ್ ವಿಡಿಯೋ ಫೂಟೇಜ್. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದ ಶಂಕಿತ ವ್ಯಕ್ತಿಯೊಬ್ಬ ಒಳಗೆ ಹೋಗಲು ವಿಫಲ ಯತ್ನ ನಡೆಸಿ ಅಲ್ಲಿಂದ ಪರಾರಿಯಾಗಿದ್ದ.

ಶಂಕಿತ ವ್ಯಕ್ತಿಯ ಕುರಿತು ಟಿವಿ೫ ನಲ್ಲಿ ಸುದ್ದಿ ಪ್ರಸಾರ ಆಗುತ್ತಿದಂತೆ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳಾದ ರಾ , ಐಬಿ ಮತ್ತು ಎನ್ ಐ ಎ ಗಳು ಈ ಕುರಿತು ಚರ್ಚೆ ಮಾಡಿ ಶಂಕಿತನ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಹೋ ಮಿನಿಸ್ಟರ್ ಎಂಬಿ ಪಾಟೀಲ್, ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಒಬ್ಬನಲ್ಲ, ಇಬ್ಬರು ಎಂದು ತಿಳಿಸಿದರು. ಸುರಕ್ಷತೆ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆ ವ್ಯಕ್ತಿಯ ಹುಡುಕಾಟ ನಡೆಸಿ ಮತ್ತು ಎಚ್ಚರಿಕೆಯಿಂದ ಇರುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಇನ್ನು ಘಟನೆ ನಡೆದಿರೋದು ವೆಸ್ಟ್ ಡಿವಿಷನ್ ಉಪ್ಪಾರ ಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ. ಹಾಗಾಗಿ ಡಿಸಿಪಿ ರವಿಚನ್ನಣ್ಣನವರ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸ್ವತಃ ತನಿಖೆಗೆ ಇಳಿದಿದ್ದಾರೆ. ಶಂಕಿತ ವ್ಯಕ್ತಿ ಬಂದ ಸಮಯದಲ್ಲಿ ಕೆಲಸ ಮಾಡ್ತಿದ್ದ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗ್ತಿದೆ. ಮೆಟ್ರೋ ಸ್ಟೇಷನ್ ಸುತ್ತಮುತ್ತಲ ಸಿಸಿಟಿವಿಯನ್ನು ಚೆಕ್ ಮಾಡ್ತಿದ್ದಾರೆ. ಆತನ ಬಳಿ ಗನ್ ಅಥವಾ ಬೇರೆ ಯಾವುದೇ ರೀತಿಯ ವಸ್ತು ಸಿಕ್ಕಿಲ್ಲವಾದ್ರೂ, ತಪಾಸಣೆ ಸಂದರ್ಭದಲ್ಲಿ ಆತ ಎಸ್ಕೇಪ್ ಆಗಿದ್ದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಇನ್ನು ಈ ವಿಚಾರದಲ್ಲಿ ಸಾರ್ವಜನಿಕರು ಸಹಕರಿಸಿ, ಯಾರೇ ಅನುಮಾಸ್ಫದ ವ್ಯಕ್ತಿಗಳು ಕಂಡು ಬಂದ್ರೆ ಪೊಲೀಸ್ರಿಗೆ ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ. ಒಟ್ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದ ಅನುಮಾನಸ್ಪಾದ ಆ ವ್ಯಕ್ತಿ ಯಾರು? ಎಸ್ಕೇಪ್ ಆದ ನಂತ್ರ ಎಲ್ಲಿ ಹೋದ.. ಸಿಲಿಕಾನ್ ಸಿಟಿಯಲ್ಲೇ ಇದ್ದಾನ ? ಇದಕ್ಕೆಲ್ಲ ಆ ಶಂಕಿತನನ್ನ ಹುಡುಕುವ ಮೂಲಕ ಸಿಲಿಕಾನ್ ಸಿಟಿ ಪೊಲೀಸರು ಉತ್ತರ ಕೊಡಬೇಕಿದೆ.

Comments are closed.