ಬೆಳಗಾವಿ : ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟು ಸೀಟುಗಳನ್ನು ಈ ಬಾರಿ ಪಡೆದರೆ ರಾಜ್ಯದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಕೈ ಹಾಕುವುದು ಖಂಡಿತ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಪಕ್ಷದಲ್ಲಿರುವ ವರಿ ಯಾರಿಗೂ ಸರ್ಕಾದ ಆಡಳಿತ ಇಷ್ಟಆಗುವುದಿಲ್ಲ.ಅದು ಸ್ವಾಭಾವಿಕ.ಹೊಸದೇನಿಲ್ಲ, 40 ವರ್ಷದಿಂದ ನೋಡಿದ್ದೀವಿ ಎಂದರು.
ಕೆಂಪು ಗೂಟದ ಕಾರು ಈಗ ಇಲ್ವೇ ಇಲ್ಲ. ಬ್ಯಾನ್ ಆಗಿರುವುದು ಅವನಿಗೆ ಗೊತ್ತೇ ಇಲ್ಲ ಎಂದು ರಮೇಶ್ ಜಾರಕಿಹೊಳಿಗೆ ತಿರುಗೇಟು ನೀಡಿದರು.
ಬಿಜೆಪಿಯವರು 2014 ಕ್ಕಿಂದ ಜಾಸ್ತಿ ಸೀಟು ಬಂದರೆ ಸರ್ಕಾರ ಅಸ್ಥಿರಕ್ಕೆ ಕೈ ಹಾಕುತ್ತಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದಲ್ಲಿ ಸರಿಯಾದ ನಡೆ ಅಲ್ಲ ಎಂದರು.