ಬೆಂಗಳೂರು: ಸುಮಲತಾ ಜೊತೆ ಕಾಂಗ್ರೆಸ್‌ನ ಬಂಡಾಯ ಶಾಸಕರು ಡಿನ್ನರ್ ಪಾರ್ಟಿಗೆ ತೆರಳಿದ ವಿಚಾರವಾಗಿ ಸಚಿವ ಜಮೀರ್ ಅಹಮದ್ ಮಾತನಾಡಿದ್ದು, ಊಟಕ್ಕೆ ಹೋಗೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆ ಇಲ್ಲ. ನನ್ನನ್ನು ಊಟಕ್ಕೆ ಕರೆದಿದ್ದರೆ ನಾನೂ ಹೋಗ್ತಿದ್ದೆ. ಅದರಲ್ಲಿ ತಪ್ಪೇನಿದೆ..? ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.
ಸುಮಲತಾ ಅಂಬರೀಶ್ ಪಾರ್ಟಿಗೆ ಬರ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ. ಊಟಕ್ಕೆ ಹೋಗಿದ್ದಾರೆ ಎಂದು ಸಿಎಂ ಬೇಜಾರಾದ್ರೆ ನಾವೇನು ಮಾಡೋದಕ್ಕೆ ಆಗುತ್ತೆ..? ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲಲ್ಲ. ಒಂದೂವರೆ ಲಕ್ಷದಿಂದ ಎರಡು ಲಕ್ಷದ ಅಂತರದಲ್ಲಿ ಗೆಲ್ತಾರೆ. ನಿಖಿಲ್ ಸೋಲುವ ಪ್ರಶ್ನೆಯೇ ಇಲ್ಲ. ಮಂಡ್ಯ ಉಪಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದ್ರೆ ಈ ಚುನಾವಣೆಯಲ್ಲಿ ಎಲ್ಲರನ್ನ ಸಿಎಂ ವಿಶ್ವಾಸಕ್ಕೆ ತೆಗದುಕೊಂಡಿಲ್ಲ ಹೇಳಿದ್ದಾರೆ.