ನವದೆಹಲಿ: ಇದು ಮುಂಬೈನಲ್ಲಿ ನಡೆದ ಹೃದಯವಿದ್ರಾವಕ ಕೃತ್ಯ. ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಬೆತ್ತಲೆ ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ 56 ವರ್ಷದ ಕಾಮುಕ ಶಿಕ್ಷಕನ ಕರ್ಮಕಾಂಡ. ಆಕೆ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸಿ ಅಮಾಯಕ ವಿದ್ಯಾರ್ಥಿಯನ್ನ ಸತತವಾಗಿ 3 ವರ್ಷ ಅತ್ಯಚಾರ ಮಾಡಿದ್ದ ಈ ಘಟನೆ ಕೊಲೆಗಿಂತಲೂ ದೊಡ್ಡ ಕ್ರೈಮ್.
ವಿದ್ಯಾರ್ಥಿನಿ ಹೆಸರು ನೇಹಾ( ಹೆಸರು ಬದಲಿಸಲಾಗಿದೆ). 13 ವರ್ಷ ವಯಸ್ಸಿನಲ್ಲಿದ್ದಾಗಲೇ ಅತ್ಯಚಾರಕ್ಕೊಳಗಾದ ಸಂತ್ರಸ್ಥೆ ಈಕೆ. ಆಕೆಯನ್ನು ಬೆದರಿಸುತ್ತಿದ್ದ ಕಾಮುಕ ಶಿಕ್ಷಕ ಇಂಟರ್ನೆಟ್ನಲ್ಲಿ ಪೋಟೊ ಅಪ್ಲೋಡ್ ಮಾಡುತ್ತೇನೆ ಎನ್ನುತ್ತಾ ಬಳಸಿಕೊಳ್ಳುತ್ತಿದ್ದ. ಇದಕ್ಕೆ ಹೆದರಿ ಏನು ಮಾಡಬೇಕೆಂದು ತೋಚದೆ ಸುಮ್ಮನಾಗುತ್ತಿದ್ದಳು ಅಮಾಯಕ ವಿದ್ಯಾರ್ಥಿನಿ. ಆತ ಹೇಳಿದ ಹಾಗೇ ಮಾಡದೆ ಹೋದರೆ ತನ್ನ ಪೋಟೊಗಳನ್ನು ಎಲ್ಲಿ ವೈರಲ್ ಮಾಡುತ್ತಾನೋ ಎಂಬ ಭಯ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು.
ಹೀಗೆ ಬ್ಲ್ಯಾಕ್ಮೇಲ್ ಮಾಡಿ ಬೇಕಾದ ಹಾಗೇ ವಿದ್ಯಾರ್ಥಿಯನ್ನ ಆತ ಬಳಸಿಕೊಂಡಿದ್ದ. ಈ ಕಾಮುಕ ಅಮಾನುಷವಾಗಿ ಈಕೆಯನ್ನು 8, 9, 10 ತರಗತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಅತ್ಯಚಾರ ಮಾಡಿದ್ದ. ಎಸ್ಎಸ್ಎಲ್ಸಿ ಮುಗಿಸಿದ ಕೂಡಲೇ ಆಕೆ ಶಾಲೆಯನ್ನೇ ತೊರೆದಳು.
ನೇಹಾ ಇಂಟರ್ ಸ್ಟಡೀಸ್ಗೆ ಇನ್ನೊಂದು ಕಾಲೇಜಿಗೆ ಸೇರಿದಳು. ಕೂಡಲೇ ಅಲ್ಲಿಗೂ ಈ ಕಾಮುಕ ಭೇಟಿ ನೀಡಿದ. ಅಲ್ಲಿದ್ದ ಶಿಕ್ಷಕರ ಜತೆಗೆ ಒಳ್ಳೆಯ ಸಂಬಂಧ ಬೆಳೆಸಿಕೊಂಡ. ಅಲ್ಲದೇ ಈಕೆಯ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಬಿಂಬಿಸಿದ. ಟಿಸಿ ಕೊಟ್ಟು ಕಳಿಸಿಬಿಡಿ ಎಂದು ಬಲವಂತ ಮಾಡಿದ. ಇಲ್ಲದೇ ಹೋದಲ್ಲಿ ನಿಮ್ಮ ಕಾಲೇಜು ಮರ್ಯಾದೆ ಹೋಗಲಿದೆ ಎಂದು ಬೆದರಿಕೆ ಹಾಕಿದ.
ಈತನ ಮಾತನ್ನು ಕೇಳಿದ ಮ್ಯಾನೇಜ್ ಮೆಂಟ್ ಒಬ್ಬ ವಿದ್ಯಾರ್ಥಿನಿಗಿಂತ ಕಾಲೇಜು ಮರ್ಯಾದೆ ಮುಖ್ಯ ಎಂದು ಭಾವಿಸಿತು. ಹಾಗಾಗಿ ನೇಹಾಗೆ ಟಿಸಿ ಕೊಟ್ಟು ಕಾಲೇಜಿನಿಂದ ಹೊರಹಾಕಬೇಕಾಯಿತು.
ಸರಿಯಾದ ಕಾರಣ ತಿಳಿಯದೇ ಟಿಸಿ ತೆಗೆದುಕೊಂಡು ನೇಹಾ ತನ್ನ ಪಾಡಿಗೆ ಮತ್ತೊಂದು ಕಾಲೇಜು ಸೇರಿದಳು. ಅಲ್ಲಿಗೂ ಹೋದ ಆ ಕಾಮುಕ ಟೀಚರ್, ಈಕೆಗೆ ಟಿಸಿಯನ್ನು ನೀಡುವಂತೆ ಸತಾಯಿಸಿದ. ಈತನ ಮಾತು ಕೇಳದ ಮ್ಯಾನೇಜ್ ಮೆಂಟ್ ನಿಮಗೂ ನೇಹಾಗೂ ಏನು ಸಂಬಂಧ ಎಂದು ಪ್ರಶ್ನಿಸಿತು. ನೇಹಾಗೂ ತಾನು ಅಂಕಲ್ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.
ಈತ ಹೇಳಿದ್ದರ ಹಿಂದಿನ ಸತ್ಯಾಸತ್ಯತೆ ತಿಳಿದುಕೊಳ್ಳಲು ಕಾಲೇಜು ಮ್ಯಾನೇಜ್ ಮೆಂಟ್ ನೇಹಾ ಪೋಷಕರನ್ನು ಕರೆಸಿತು. ನಂತರ ನೇಹಾ ಪೋಷಕರು ಆತನಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಳಿಕ ನೇಹಾ ಜತೆಗೆ ಈ ವಿಚಾರದ ಬಗ್ಗೆ ಸೀಕ್ರೆಟ್ ಆಗಿ ಮಾತಾಡಲು ಕಾಲೇಜು ಮ್ಯಾನೇಜ್ ಮೆಂಟ್ ಮುಂದಾಯ್ತು. ಆಗ ಭಯದಲ್ಲಿದ್ದ ನೇಹಾಗೆ ಧೈರ್ಯ ತುಂಬಿತು. ಬೆನ್ನಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿತು. ಆಗ ನೇಹಾ ಇಷ್ಟು ವರ್ಷ ಆಕೆ ಅನುಭವಿಸಿದ ಮಾನಸಿಕ ಹಿಂಸೆ; ತನ್ನೊಳಗಿದ್ದ ನೋವನ್ನು ಹೊರಗೆ ಹಾಕಿದಳು. ಕೊನೆಗೂ ಆ ಕಾಮುಕ ಟೀಚರ್ನ ಬಂಡವಾಳ ಬಯಲಾಯ್ತು. ಕೂಡಲೇ ಎಚ್ಚೆತ್ತ ಮ್ಯಾನೇಜ್ ಮೆಂಟ್ ಪೊಲೀಸರಿಗೆ ದೂರು ನೀಡಿತು. ಈ ಕಾಮುಕನಿಗೆ ಬಲೆ ಬೀಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
Comments are closed.