ಕರ್ನಾಟಕ

ಸಿದ್ದರಾಮಯ್ಯ ರಾಮನಾದರೆ, ಕುಮಾರಸ್ವಾಮಿ ಲಕ್ಷ್ಮಣ!

Pinterest LinkedIn Tumblr


ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮನಂತೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಲಕ್ಷ್ಮಣನಂತೆ, ಇಬ್ಬರು ಅಣ್ಣ ತಮ್ಮಂದಿರಂತೆ ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಹೇಳಿದ್ದಾರೆ.

ನನ್ನ ಪಾತ್ರ ಏನು ಎಂಬುದು ಮುಂದೆ ತಿಳಿಯಲಿದೆ

ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಮನಂತೆ ಕುಮಾರಸ್ವಾಮಿ ಲಕ್ಷ್ಮಣನಂತೆ, ರಾವಣನ ಸಹೋದರ ‘ವಿಬಿಶಣ’ ರಾಮನಿಗೆ ಆಂಜನೇಯನಿಗಿಂತ ಹೆಚ್ಚು ಆಪ್ತ. ಆದರೆ ಆತ ರಾವಣನ ಸಹೋದರ. ನಾನು ಏನು.? ನನ್ನ ಪಾತ್ರ ಏನು ಎಂಬುದು ಮುಂದೆ ತಿಳಿಯಲಿದೆ ಎಂದು ತಿಳಿಸಿದರು.

1ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ

ಇನ್ನೂ ಇದೇ ವೇಳೆ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಬೇರೆ ಅರ್ಥದಲ್ಲಿ ಹೇಳಿಲ್ಲ. ಕಡೆಯ ಸಮಯದಲ್ಲಿ ಒಂದೆರಡು ಕಡೆ ಹೀಗೆ ಆಗಿದೆ ಅಂದಿದ್ದಾರೆ. ಅದರಲ್ಲಿ ಬೇರೆ ಅರ್ಥ ಅಥವಾ ವಿಚಾರ ಏನಿಲ್ಲ. ಮೈತ್ರಿಯಿಂದ 2ಲಕ್ಷ ಮತಗಳಿಂದ ಗೆಲ್ಲಬೇಕಿತ್ತು. ಈ ರೀತಿ ಆಗಿರುವ ಕಾರಣದಿಂದಲೇ 1ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ನನ್ನ ಗೆಲುವು ನಿಶ್ಚಿತ

ನನಗೆ ಕ್ಷೇತ್ರದ ಜನರ ನಾಡಿ ಮಿಡಿತ ಚೆನ್ನಾಗಿ ಗೊತ್ತಿದೆ. ಸಮಯವಕಾಶದ ಕೊರತೆಯಿಂದ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ, ಕೆಳಹಂತದ ಕೆಲ ಕಾರ್ಯಕರ್ತರನ್ನು ಓಲೈಸೋದಕ್ಕು ಕಷ್ಟವಾಯಿತೆನೋ.? ಆದರೆ ಇದು ಒಂದೆರಡು ಕಡೆ ಮಾತ್ರ ಆಗಿರೋದು. ಎಲ್ಲ ಕಡೆಯಲ್ಲು ಹೀಗೆ ಆಗೋದಕ್ಕೆ ಸಾಧ್ಯವಿಲ್ಲ. ನಾನು ಅಧಿಕ ಮತಗಳಿಂದ ಗೆಲ್ಲುತ್ತೇನೆ, ನನ್ನ ಗೆಲುವು ನಿಶ್ಚಿತ ಎಂದು ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಸ್ಪಷ್ಟಪಡಿಸಿದರು.

Comments are closed.