ಕರ್ನಾಟಕ

ಬೆಂಗಳೂರು: ಪತ್ನಿ, ಮಗಳ ಸ್ನಾನದ ವಿಡಿಯೋ ಮೊಬೈಲಿನಲ್ಲಿ ಚಿತ್ರೀಕರಿಸಿದ ಗಂಡ; ಸೆಕ್ಸ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವ ಬೆದರಿಕೆ !

Pinterest LinkedIn Tumblr

ಬೆಂಗಳೂರು: ನನ್ನ ಗಂಡ ಹಲವು ವರ್ಷಗಳಿಂದ ನಮಗೆ ತಿಳಿಯದಂತೆ ನನ್ನ ಮತ್ತು ನನ್ನ ಮಗಳು ಸ್ನಾನ ಮಾಡುವುದು ಹಾಗೂ ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡುತ್ತಿದ್ದು ಸುಮ್ಮನಿರದಿದ್ದರೆ ಅದನ್ನು ಸೆಕ್ಸ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪತ್ನಿ ದೂರು ನೀಡಿದ್ದಾರೆ.

ಬೆಂಗಳೂರಿನ ಆಡುಗೋಡಿಯಲ್ಲಿ ನೆಲೆಸಿರುವ 45 ವರ್ಷದ ಮಹಿಳೆ ನನ್ನ ಗಂಡ 2012ರಿಂದ ನಮಗೆ ತಿಳಿಯದಂತೆ ನಾನು ಸ್ನಾನ ಮಾಡುವುದು ಮತ್ತು ಬಟ್ಟೆ ಬದಲಿಸುವುದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಅದು ತಿಳಿದು ಆತನಿಗೆ ನೀನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಕ್ಕೆ ಜಾಸ್ತಿ ಮಾತನಾಡಿದರೆ ನಿಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ಅಲ್ಲದೆ ನನ್ನ ಮಗಳು ಬಟ್ಟೆ ಬದಲಿಸುವ ಹಾಗೂ ಸ್ನಾನ ಮಾಡುವುದನ್ನು ಸೆರೆಹಿಡಿದಿದ್ದಾನೆ. ಆತ ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ. ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ನಾನು ಪ್ರಶ್ನಿಸಿದ್ದೆ. ಅಲ್ಲದೆ ಆತ ಬದಲಾಗಬಹುದು ಎಂದು ನಾನು ಭಾವಿಸಿದ್ದೆ ಆದರೆ ಆತನ ಉಪಟಳ ಇನ್ನೂ ಜಾಸ್ತಿಯಾಗಿದ್ದರಿಂತ ಪೊಲೀಸರಿಗೆ ದೂರು ನೀಡುವ ನಿರ್ಧಾರ ಮಾಡಿದ್ದಾಗಿ ಮಹಿಳೆ ತಿಳಿಸಿದ್ದಾರೆ.

Comments are closed.