ಕರ್ನಾಟಕ

ಗೃಹ ಸಚಿವರ ಹೆಸರಲ್ಲಿ ನಕಲಿ ಪತ್ರ ವೈರಲ್​ ಆರೋಪ; ಸಿಐಡಿಯಿಂದ ಪೋಸ್ಟ್‌ಕಾರ್ಡ್‌ ಸಂಪಾದಕ ಮಹೇಶ್ ಹೆಗ್ಡೆ ಬಂಧನ

Pinterest LinkedIn Tumblr

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ನಕಲಿ ಪತ್ರವನ್ನು ವೈರಲ್​ ಮಾಡಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ವೆಬ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ  ಹೆಗ್ಡೆ ಎಂಬುವವರನ್ನು ಸಿಐಡಿ ಸೈಬರ್ ಘಟಕದ ಪೊಲೀಸರು ಬಂಧಿಸಿದ್ದಾರೆ.

ಗೃಹ ಸಚಿವ ಎಂಬಿ ಪಾಟೀಲ್ ಲಿಂಗಾಯತ ಧರ್ಮದ ವಿಚಾರವಾಗಿ ಸೋನಿಯಾ ಗಾಂಧಿಗೆ ಪತ್ರ ಬರೆದ್ದಾರೆಂದು ನಕಲಿ ಪತ್ರವನ್ನು ಮಹೇಶ್​ ಹೆಗ್ಡೆ ವೈರಲ್ ಮಾಡಿದ್ದರು. ಈ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ ಅವರು ವಿಜಯಪುರದ ಅದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ದೂರು ಆಧರಿಸಿ, ಸಿಐಡಿ ಸೈಬರ್ ವಿಂಗ್‌ ಪೊಲೀಸರು ಆರೋಪಿ ಮಹೇಶ್​ ಹೆಗ್ಡೆನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಕೂಡ ಮಹೇಶ್​ ಹೆಗ್ಡೆ ವಿವಿಧ ಪ್ರಕರಣಗಳ ಸಂಬಂಧ ನಾಲ್ಕು ಬಾರಿ ಬಂಧನಕ್ಕೆ ಒಳಗಾಗಿದ್ದಾರೆ. 2018ರ ಮಾರ್ಚ್​ 29ರಂದು ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿ ಜೈಲು ಸೇರಿದ್ದರು. ಕೋಮು ಗಲಭೆ ಸೃಷ್ಠಿಸುವ ಸುದ್ದಿ ಪ್ರಕಟ ಮಾಡಿದ್ದ ಆರೋಪದ ಮೇಲೆ ಮಹೇಶ್​ ಹೆಗ್ಡೆ ಒಮ್ಮೆ ಜೈಲಿಗೆ ಹೋಗಿದ್ದರು.

ಸರ್ಕಾರದ ವಿರುದ್ಧ ಖಂಡನೆ:
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ. ಗಾಂಧಿ ಕುಟುಂಬದ ಸುಳ್ಳನ್ನು ಬಹಿರಂಗ ಪಡಿಸಿದ್ದಕ್ಕೆ ಮಹೇಶ್ ಹೆಗ್ಡೆಯನ್ನು ಬಂಧಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಕಾಯಕರ್ತರ ವಿರುದ್ಧ ದುರುದ್ದೇಶಪೂರ್ವಕವಾಗಿ ಕುಮಾರಸ್ವಾಮಿ ಸರ್ಕಾರ ವಿಕ್ರಂ ಹೆಗ್ಡೆ ಅವರನ್ನು ಬಂಧಿಸಿದೆ. ಯಾವುದೇ ಕಾರಣ ಇಲ್ಲದೇ ವಿಕ್ರಂ ಹೆಗ್ಡೆಯನ್ನು ಸರ್ಕಾರ ಬಂಧಿಸಿದೆ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

Comments are closed.