ಕರ್ನಾಟಕ

ನನ್ನನ್ನು ಯಾರೂ ಗುರಿ ಮಾಡಲು ಆಗುವುದಿಲ್ಲ: ನಟ ಯಶ್

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ. ಒಂದು ವೇಳೆ ನನ್ನ ತಂಟೆಗೆ ಬಂದರೆ ನಾನು ಕೂಡ ಸುಮ್ಮನೆ ಇರೋದಿಲ್ಲ ಎಂದು ಗುಡುಗಿದ್ದಾರೆ.

ವಿಶ್ವ ಭೂ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನನ್ನನ್ನು ಬೆಂಬಲಿಸಿದವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿದ್ದರು ಎಂದು ಪ್ರಶ್ನಿಸಿದ್ದಕ್ಕೆ ಯಶ್ ಸುಮಲತಾ ಅವರು ತಮ್ಮ ಭಾವನೆಯನ್ನು ಹೇಳಿಕೊಂಡಿದ್ದಾರೆ. ಆದರೆ ನನ್ನನ್ನು ಟಾರ್ಗೆಟ್ ಮಾಡಬೇಕು ಎಂದರೆ ತುಂಬಾ ಕಷ್ಟ ಎಂದಿದ್ದಾರೆ.

ನಾವು ಜನರ ಆಸ್ತಿ. ಅವರಿಂದಲೇ ಬೆಳೆದವರು. ಹಾಗಾಗಿ ನಮ್ಮನ್ನು ಟಾರ್ಗೆಟ್ ಮಾಡುವುದು ಸುಲಭವಲ್ಲ. ಹೇಳಿಕೊಂಡವರೆಲ್ಲಾ ಅವರು ಅಂದುಕೊಂಡಂತೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ತಂಟೆಗೆ ಬಂದರೆ ಅವರು ಕೂಡ ಹುಷಾರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.

Comments are closed.