ಕರ್ನಾಟಕ

ರಾಹುಲ್‌ ಪ್ರಧಾನಿಯಾದರೆ ಅವರ ಪಕ್ಕದಲ್ಲೇ ಕೂರುತ್ತೇನೆ: ದೇವೇಗೌಡ

Pinterest LinkedIn Tumblr


ಬೆಂಗಳೂರು : ಸಕ್ರಿಯ ರಾಜಕಾರಣದಿಂದ ನಾನು ನಿವೃತ್ತನಾಗುವುದಿಲ್ಲ ಎಂದು ಜೆಡಿಎಸ್‌ ಪರಮೋಚ್ಚ ನಾಯಕ, ಮಾಜಿ ಪ್ರಧಾನಿ, ಎಚ್‌ ಡಿ ದೇವೇಗೌಡ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಂದೊಮ್ಮೆ ದೇಶದ ಪ್ರಧಾನಿಯಾದರೆ ನಾನು ಅವರ ಪಕ್ಕದಲ್ಲೇ ಕೂತು ಸಕ್ರಿಯ ರಾಜಕಾರಣದಲ್ಲಿ ನಿರತನಾಗಿರುತ್ತೇನೆ ಎಂದು ದೇವೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಮೂರು ವರ್ಷಗಳ ಹಿಂದೆ ನಾನಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಬದಲಾದ ಪರಿಸ್ಥಿತಿ ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಬಲವಂತಪಡಿಸಿದೆ ಎಂದವರು ಹೇಳಿದರು.

ನಾನೇನೂ ಮುಚ್ಚಿಡಲು ಬಯಸುವುದಿಲ್ಲ; ನನಗೆ ಯಾವುದೇ ಮಹಾತ್ವಾಕಾಂಕ್ಷೆ ಇಲ್ಲ. ಆದರೆ ಸಕ್ರಿಯ ರಾಜಕಾರಣದಿಂದ ನಾನು ನಿವೃತ್ತನಾಗುವುದಿಲ್ಲ ಎಂದು ಹಿಂದೆಯೂ ಅನೇಕ ಬಾರಿ ಹೇಳಿದ್ದೆ. ಈಗ ಮತ್ತೆ ಅದನ್ನೇ ಹೇಳುತ್ತಿದ್ದೇನೆ ಎಂದು ಗೌಡ ಹೇಳಿದರು.

ಒಂದೊಮ್ಮೆ ರಾಹುಲ್‌ ಗಾಂಧಿ ಪ್ರಧಾನಿ ಯಾದರೆ ನಾನು ಅವರ ಪಕ್ಷದಲ್ಲೇ ಕೂತಿರುತ್ತೇನೆ. ಮತ್ತೆ ನಾನು ಪ್ರಧಾನಿಯಾಗುವ ಅಗತ್ಯವೇನೂ ಇಲ್ಲ ಎಂದು ಗೌಡ ಹೇಳಿದರು.

Comments are closed.