ಕರ್ನಾಟಕ

ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಮೊಹಮ್ಮದ್ ಯೂಸುಫ್ ಖಾನ್ ನಾಪತ್ತೆ ಹಿಂದಿನ ಸತ್ಯ ಬಹಿರಂಗ

Pinterest LinkedIn Tumblr

ಶಿವಮೊಗ್ಗ: ನಾಪತ್ತೆಯಾಗಿ ಸುದ್ದಿ ಮಾಡಿದ್ದ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಮೊಹಮ್ಮದ್ ಯೂಸುಫ್ ಖಾನ್ ಎಸ್‌ ಪಿ ಕಚೇರಿಗೆ ಹಾಜಾರಾಗಿದ್ದಾರೆ. ಶಿವಮೊಗ್ಗ ಎಸ್ಪಿ ಡಾ. ಅಶ್ವಿನಿ ಯವರಿಗೆ ನಾಪತ್ತೆಯಾದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ.

ಎಪ್ರಿಲ್ 17 ರ ರಾತ್ರಿ 2 ಗಂಟೆಗೆ ನಾಪತ್ತೆ ಯಾಗಿದ್ದ ಯುಸೂಫ್ ಖಾನ್ ಹಾವೇರಿಯಲ್ಲಿ ಪತ್ತೆಯಾಗಿದ್ದರು. ಅಷ್ಟಕ್ಕೂ ಖಾನ್ ನಾಪತ್ತೆಯಾಗಲು ಕಾರಣವೇನು?

ವಾಟ್ಸ್ ಆಪ್ ನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಖಾನ್ ಮನೆ ಬಿಟ್ಟು ಹೋಗಿದ್ದರು. ನಂತರ ಹಾವೇರಿ, ರಾಣೆ ಬೆನ್ಬೂರು, ಲಕ್ಷೇಶ್ವರ, ಹರಿಹರ ಮೊದಲಾದ ಕಡೆಗಳಲ್ಲಿ ಮನಬಂದಂತೆ ಸುತ್ತಾಡಿ ಕೊನೆಗೆ ಮೊಮ್ಮಕ್ಕಳ ನೆನಪಾಗಿ ಮನೆಗೆ ಕರೆ ಮಾಡಿದ್ದರು.

ಯುಸೂಫ್ ಖಾನ್ ಬಗ್ಗೆ ಮಾಹಿತಿ ಪಡೆದ ಸ್ನೇಹಿತರು ಎಸ್ಪಿ ಕಚೇರಿಗೆ ಕರೆತಂದರು. ತನ್ನ ವಿರುದ್ಧ ಅವಹೇಳನಕಾರಿ ಮೆಸೇಜ್ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ಬ್ಲಾಕ್ ಮೇಲ್ ಪ್ರಕರಣವನ್ನು ಯೂಸೂಫ್ ದಾಖಲಿಸಿದ್ದಾರೆ.

Comments are closed.