ಕರ್ನಾಟಕ

ಹೋಮ್ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಡಿಸಿಪಿ ಅಣ್ಣಾಮಲೈ ಹೇಳಿದ್ದೇನು ಗೊತ್ತಾ?

Pinterest LinkedIn Tumblr

ಬೆಂಗಳೂರು: ಡಿಸಿಪಿ ಅಣ್ಣಾಮಲೈ ಮೊದಲಿಂದಲೂ ಕೂಡ ತನ್ನ ಕಾರ್ಯವೈಖರಿಯಲ್ಲಿ ವಿಭಿನ್ನ ಹಾಗೂ ವಿಶೀಷ್ಟ. ತನ್ನ ಕೆಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಅಣ್ಣಾಮಲೈ ಎಂದು ಕೂಡ ಆತ್ಮೀಯವಾಗಿರುತ್ತಾರೆ.

ಐಪಿಎಸ್ ಅಧಿಕಾರಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಮಾಡಿರುವ ಟ್ವೀಟ್​ವೊಂದು ಇದೀಗಾ ವೈರಲ್ ಆಗಿದ್ದು ಅವರಿಗೆ ಹೋಮ್ ಗಾರ್ಡ್‌ಗಳ ಬಗೆಗಿನ ಪ್ರೀತಿ, ವಿಶ್ವಾಸ ವ್ಯಕ್ತವಾಗಿದೆ.

ಚುನಾವಣೆ ಕರ್ತವ್ಯದ ಸಂದರ್ಭ ಹೋಮ್ ಗಾರ್ಡ್‌ಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿರುವ ಸಿಂಗಂ, ಲೋಕಸಭಾ ಚುನಾವಣೆ ಮತ್ತು ಯಾವುದೇ ಚುನಾವಣೆ ಬಂದರೆ ಅದರ ಹೀರೋಗಳೆಂದರೆ ನಮ್ಮ ಹೋಮ್‌ ಗಾರ್ಡ್‌ಗಳು ಅಂತಾ ಟ್ವಿಟ್ಟರ್​ನಲ್ಲಿ ಪೋಸ್ಟ್​ ಹಾಕಿದ್ದಾರೆ.

ಶ್ರಮವರಿಯದ ಯುದ್ಧ ವೀರರೆಂದರೆ ಕಾರ್ಪೆಂಟರ್ಸ್‌, ಕೂಲಿ ಕಾರ್ಮಿಕರು, ಡ್ರೈವರ್ಸ್‌, ಇತ್ಯಾದಿ. ಆದರೆ ಅವರೆಲ್ಲರಿಗಿಂತ ಮಿಗಿಲಾದ ಕೆಲಸವೆಂದರೆ ಹೋಮ್‌ಗಾರ್ಡ್ ಕೆಲಸ ಅವರಿಗೆ ಗೌರವವನ್ನು ನೀಡಲೇಬೇಕು ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

ಅಣ್ಣಾಮಲೈ, ಚುನಾವಣೆಯಲ್ಲಿ ಶ್ರಮಿಸಿದ ಹೋಮ್​ಗಾರ್ಡ್ಸ್​​ನೊಂದಿಗೆ ಸೆಲ್ಫಿಗೆ ಪೋಸ್​ ಕೊಟ್ಟಿರುವ ಫೋಟೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಿಬ್ಬಂದಿಗಳ ಕೂಡ ಈ ಬಗ್ಗೆ ಫುಲ್ ಖುಷ್ ಆಗಿದ್ದಾರೆ.

Comments are closed.