ಕರ್ನಾಟಕ

ಸುಮಲತಾ ಪರ ಇವಿಎಂನಲ್ಲಿ ಮತ ಹಾಕಲು ಗ್ರಾಮಸ್ಥರ ಪರದಾಟ

Pinterest LinkedIn Tumblr


ಮಂಡ್ಯ: ಹೈವೋಲ್ಟೆಜ್​ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಬೆಳಗ್ಗೆಯಿಂದ ಶಾಂತಿಯುತ ಮತದಾನ ನಡೆಯುತ್ತಿದೆ. ಇದೇ ವೇಳೆ ಕೆಲವು ಕಡೆ ಸಣ್ಣಪುಟ್ಟ ಲೋಪಗಳು ಕಾಣಿಸಿಕೊಂಡಿವೆ.

ಮಂಡ್ಯದ ನಾಗಮಂಗಲ ತಾಲೂಕಿನ ಅರಗಿನಮೇಳೆ ಗ್ರಾಮದ ಬೂತ್​ ಸಂಖ್ಯೆ 202ರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಇವಿಎಂನಲ್ಲಿ ಓಟ್ ಹಾಕಲು ಮತದಾರ ಪರದಾಡಿದ ಘಟನೆ ನಡೆದಿದೆ.

ಸುಮಲತಾ ಅಂಬರೀಷ್ ಹೆಸರಿನ ಮುಂದಿನ ಬಟನ್​ ಅನ್ನು ನಾಲ್ಕೈದು ಬಾರಿ ಒತ್ತಿದ ಮೇಲೆ ಮತಯಂತ್ರದಲ್ಲಿ ಸುಮಲತಾಗೆ ಮತ ಚಲಾವಣೆಯಾಗುತ್ತಿದೆ. ಒಂದು ಅಥವಾ ಎರಡು ಬಾರಿ ಒತ್ತಿದರೆ ಮತ ಸ್ವೀಕರಿಸುತ್ತಿಲ್ಲ. ಮೂರ್ನಾಲ್ಕು ಬಾರಿ ಒತ್ತಿದ ಮೇಲಷ್ಟೇ ಅವರಿಗೆ ಮತ ಬೀಳುತ್ತಿದೆ. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಮತ್ತು ಸುಮಲತಾ ಪರ ಬೆಂಬಲಿಗರು, ದೋಷಪೂರಿತ ಮತಯಂತ್ರ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವರ ತರಾಟೆ

ಇನ್ನು ಮಂಡ್ಯದ ಚಿನಕುರುಳಿ ಗ್ರಾಮದ ಮತಗಟ್ಟೆ ಸಂಖ್ಯೆ 129ರಲ್ಲಿ ಮತ ಚಲಾಯಿಸಲು ಸಚಿವ ಸಿ.ಎಸ್.ಪುಟ್ಟರಾಜು ಆಗಮಿಸಿದ್ದರು. ಈ ವೇಳೆ ಮತಯಂತ್ರ ಏರುಪೇರಾಗಿತ್ತು. ಇದನ್ನು ಕಂಡ ಪುಟ್ಟರಾಜು, ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸಚಿವರ ಮತದಾನ ಮಾಡುವಾಗ ಮತಯಂತ್ರ ಏರುಪೇರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುಟ್ಟರಾಜು, ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ಮತಗಟ್ಟೆ ಅಧಿಕಾರಿ ವಿರುದ್ಧ ಸಚಿವರು ದೂರು ನೀಡಿದರು. ತಕ್ಷಣವೇ ಮತಗಟ್ಟೆ ಅಧಿಕಾರಿ ಬದಲಿಸುವಂತೆ ಸಚಿವರ ಒತ್ತಾಯಿಸಿದರು.

Comments are closed.