ಕರ್ನಾಟಕ

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಾಯಕರಿಗೆ ಚಪ್ಪಲಿ ಹಾರ!

Pinterest LinkedIn Tumblr


ಕಲಬುರಗಿ: ಲೋಕ ಸಮರದ ಸಂದರ್ಭ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಂಜಾರ ಸಮಾಜದ ನಾಯಕರ ವಿರುದ್ಧ ಆಕ್ರೋಶ ಮುಂದುವರಿದ್ದು ಕಿಡಿಗೇಡಿಗಳು ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ.

ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬಾಬುರಾವ್ ಚವ್ಹಾಣ ಹಾಗೂ ಇತರ ಮೂವರ ಫ್ಲೆಕ್ಸ್ ಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು ಆಕ್ರೋಶ ಹೊರ ಹಾಕಿದ್ದಾರೆ.ಕಲಬುರಗಿಯ ಭಂಕೂರು ಗ್ರಾಮದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಹಾಕಲಾಗಿರುವ ಫ್ಲೆಕ್ಸ್ ಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಅಷ್ಟೇ ಅಲ್ಲ, ಸಮಾಜದ ದ್ರೋಹಿಗಳು ಅನ್ನೋ ಎಂದು ಬರೆಯಲಾಗಿದೆ.

ಬಂಜಾರ ಸಮಾಜದ ಮುಖಂಡರು ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಪ್ರಚಾರ ಮಾಡುತ್ತಿರೋದಕ್ಕೆ ರೊಚ್ಚಿಗೆದ್ದು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

Comments are closed.