ಕರ್ನಾಟಕ

ಕರ್ನಾಟಕದಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭ

Pinterest LinkedIn Tumblr

ಬೆಂಗಳೂರು: ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ.

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ನಡೆಯುತ್ತಿದೆ. 14 ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, 4ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಈ 14 ಕ್ಷೇತ್ರಗಳ ಪೈಕಿ ಮಂಡ್ಯ ಕಣ ಅತ್ಯಂತ ಹೈವೋಲ್ಟೇಜ್, ಹಾಟ್‍ಸೀಟ್ ಎನಿಸಿಕೊಂಡಿದೆ.

ಈ ದಾಖಲೆ ತೋರಿಸಿ:
ಆಧಾರ್ ಕಾರ್ಡ್, ಪ್ಯಾನ್‍ಕಾರ್ಡ್, ರೇಷನ್‍ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್‍ಬುಕ್, ಪೋಸ್ಟ್ ಆಫೀಸ್ ಪಾಸ್‍ಬುಕ್, ನರೇಗಾ ಜಾಬ್ ಕಾರ್ಡ್, ಪಾಸ್‍ಪೋರ್ಟ್, ಚುನಾವಣಾ ಆಯೋಗದ ನಿಮ್ಮ ಫೋಟೋ ಇರುವ ಓಟರ್ ಸ್ಲಿಪ್, ಕಾರ್ಮಿಕ ಸಚಿವಾಲಯ ನೀಡಿದ ಹೆಲ್ತ್ ಇನ್ಶೂರೆನ್ಸ್ ಕಾರ್ಡ್, ನಿಮ್ಮ ಫೋಟೋ ಇರುವ ಪೆನ್ಶನ್ ಪಡೆಯೋ ದಾಖಲೆ.

ಯಾವೆಲ್ಲ ರಾಜ್ಯಗಳಲ್ಲಿ ಚುನಾವಣೆ?
ಇವತ್ತು ಬರೀ ಕರ್ನಾಟಕ ಅಷ್ಟೇ ಅಲ್ಲ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಕರ್ನಾಟಕ 14 ಕ್ಷೇತ್ರ, ತಮಿಳುನಾಡು 38 ಕ್ಷೇತ್ರ, ಮಹಾರಾಷ್ಟ್ರ 10 ಕ್ಷೇತ್ರ, ಉತ್ತರಪ್ರದೇಶ 8 ಕ್ಷೇತ್ರ, ಅಸ್ಸಾಂ 5 ಕ್ಷೇತ್ರ, ಬಿಹಾರ 5 ಕ್ಷೇತ್ರ, ಒಡಿಶಾ 5 ಕ್ಷೇತ್ರ, ಛತ್ತೀಸ್‍ಗಢ 3 ಕ್ಷೇತ್ರ, ಪ. ಬಂಗಾಳ 3 ಕ್ಷೇತ್ರ, ಕಾಶ್ಮೀರ 2 ಕ್ಷೇತ್ರ, ಮಣಿಪುರ 1 ಕ್ಷೇತ್ರ, ತ್ರಿಪುರ 1 ಕ್ಷೇತ್ರ, ಪುದಿಚೇರಿ 1 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

ಮತದಾರರು ಎಷ್ಟಿದ್ದಾರೆ..?
* ಒಟ್ಟು ಮತದಾರರು – 2,67,51,893
* ಪುರುಷರು – 1,35,45,818
* ಮಹಿಳೆಯರು – 1,32,03,258
* ಇತರೆ – 287

* ಒಟ್ಟು ಮತಗಟ್ಟೆಗಳು – 30,197
* ಸೂಕ್ಷ್ಮ ಮತಗಟ್ಟೆಗಳು – 6,318
* ಸಾಮಾನ್ಯ ಮತಗಟ್ಟೆಗಳು – 23,879

ಖಾಕಿ ಕಣ್ಗಾವಲು
* ಡಿವೈಎಸ್‍ಪಿ – 282
* ಪೊಲೀಸ್ ನಿರೀಕ್ಷಕರು – 851
* ಪಿಎಸ್‍ಐ – 1,188
* ಮುಖ್ಯಪೇದೆ, ಪೊಲೀಸ್ ಪೇದೆ- 42,950
* ಗೃಹರಕ್ಷಕ ದಳ – 40,117
* ಅರಣ್ಯ ರಕ್ಷಕರು – 414
* ಜೈಲ್ ವಾರ್ಡನ್ಸ್ – 990
* ಒಟ್ಟು ಸಿಬ್ಬಂದಿ – 90,997

Comments are closed.