ಕರ್ನಾಟಕ

‘ನೀವು ಕನ್ನಡ ಕಲಿಯಬೇಕು’ ; ಚುನಾವಣಾ ಪ್ರಚಾರಕ್ಕೆ ಬಂದ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮನವಿ ಮಾಡಿದ ಮಹಿಳೆಯರು

Pinterest LinkedIn Tumblr

ಬೆಂಗಳೂರು: ತಾವು ಸೌಲಭ್ಯಗಳಿಂದ ವಂಚಿತವಾಗಿದ್ದೇವೆ ಎಂದು ಜಮ್ಮು-ಕಾಶ್ಮೀರದ ಜನರಿಗೆ ಗೊತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಕೇವಲ 3-4 ಕುಟುಂಬಗಳು ಮಾತ್ರ ಅಭಿವೃದ್ಧಿ ಕಾಣುತ್ತಿದ್ದಾರೆ. ಕೇಂದ್ರದಲ್ಲಿ ಪ್ರತಿ ಸರ್ಕಾರ ಬಂದಾಗಲೂ ಜಮ್ಮು-ಕಾಶ್ಮೀರಕ್ಕೆ ವಿಶೇಷವಾಗಿ ಅನುದಾನ ಕೊಡುತ್ತದೆ, ಆದರೆ ಅದು ಜನರಿಗೆ ಸರಿಯಾಗಿ ತಲುಪುವುದು ಕಾಣುತ್ತಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಹಲವು ಸಮಸ್ಯೆಗಳನ್ನು ಹೊಂದಿರುವ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿನ 370 ಮತ್ತು 35 ಎ ಪರಿಚ್ಛೇದವನ್ನು ಪರಾಮರ್ಶಿಸುವುದು ಒಳ್ಳೆಯದಲ್ಲವೇ, ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಆದ್ಯತೆ ನೀಡಲಿದೆ ಎಂದರು.

ಇದಕ್ಕೂ ಮುನ್ನ ಅವರು, ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮನೆ ಮನೆ ಪ್ರಚಾರ ಮಾಡಿದರು.

ಈ ವೇಳೆ ಕನ್ನಡದಲ್ಲಿ ಮತಯಾಚನೆ ಮಾಡುವಂತೆ ಮತದಾರರು ಬೇಡಿಕೆ ಇಟ್ಟರು. ನಿರ್ಮಲಾ ಸೀತಾರಾಮನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಮತ ಕೇಳುತ್ತಿದ್ದರು. ಈ ವೇಳೆ ಕೆಲ ಮಹಿಳೆಯರು ಕನ್ನಡದಲ್ಲಿ ಮತಯಾಚನೆ ಮಾಡಿ ಎಂದು ಕೇಳಿಕೊಂಡರು. ಇದಕ್ಕೆ ರಕ್ಷಣಾ ಸಚಿವೆ ನನಗೆ ಕನ್ನಡ ಬರಲ್ಲ, ತೇಜಸ್ವಿ ಸೂರ್ಯಗೆ ಪ್ಲೀಸ್ ಸಪೋರ್ಟ್ ಎಂದು ಹೇಳುತ್ತಾ ಇಂಗ್ಲೀಷ್‍ನಲ್ಲೇ ಮತಯಾಚನೆ ಮಾಡಿದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ಕನ್ನಡ ಕಲಿಯಬೇಕೆಂದು ಮಹಿಳೆಯರು ಬೇಡಿಕೆ ಇಟ್ಟರು.

Comments are closed.