ಕರ್ನಾಟಕ

ದ್ವಿತೀಯ ಪಿಯುಸಿ: ಏ.15ಕ್ಕೆ ಫಲಿತಾಂಶ ಪ್ರಕಟ

Pinterest LinkedIn Tumblr


ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏ.15ರಂದು ಪ್ರಕಟವಾಗಲಿದ್ದು, ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಖಚಿತ ಮಾಹಿತಿ ನೀಡಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ. ಏ.16ರಂದು ಎಲ್ಲ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಈ ಮೊದಲು ಏ.17ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, 15ಕ್ಕೇ ಫಲಿತಾಂಶ ಹೊರಬೀಳಲಿದೆ. ಮೌಲ್ಯಮಾಪನದ ಬಳಿಕ ಅಂಕಗಳನ್ನು ಆನ್ ಲೈನ್ ಮೂಲಕ ಸರ್ವರ್ ಗೆ ಸೇರಿಸುವುದರಿಂದ ಈ ಬಾರಿ ಫಲಿತಾಂಶವನ್ನು ಬೇಗ ಪ್ರಕಟಿಸಲಾಗುವುದು.

ಈ ಬಾರಿ 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು. ಇದರಲ್ಲಿ ಒಟ್ಟು 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ. ಏ. 15ರಂದು ಬೆಳಗ್ಗೆ 11 ಗಂಟೆಗೆ pue.kar.nic.in ಹಾಗೂ karresults.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

Comments are closed.