ಕರ್ನಾಟಕ

ನಿಖಿಲ್ ಕುಮಾರಸ್ವಾಮಿ ಹಣ ಹಂಚುವ ದೃಶ್ಯ ಕ್ಯಾಮರಾದಲ್ಲಿ ಸೆರೆ

Pinterest LinkedIn Tumblr


ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಣ ಹಂಚುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿ ನಿಖಿಲ್ ಕುಮಾರಸ್ವಾಮಿ 500 ರೂಪಾಯಿ ನೋಟುಗಳನ್ನು ಹಿಡಿದುಕೊಂಡು ಎಣಿಸುತ್ತಾ ವ್ಯಕ್ತಿಗೆ ನೀಡಲು ಮುಂದಾಗಿರುವುದು ಸೆರೆಯಾಗಿದೆ.
ಆದರೆ ಈ ಬಗ್ಗೆ ಜೆಡಿಎಸ್ ಸ್ಪಷ್ಟನೆ ನೀಡಿದ್ದು ನಿಖಿಲ್ ಕುಮಾರಸ್ವಾಮಿ ತಮ್ಮ ಖಾಸಗಿ ಸಹಾಯಕನಿಗೆ ಹಣ ನೀಡಿದ್ದರು ಎಂದು ಹೇಳಿದೆ. ಮಂಡ್ಯ ಜನತೆ ನಿಖಿಲ್ ಪ್ರಚಾರಕ್ಕೆ ಹಣ ನೀಡುತ್ತಿದ್ದು ಹಣವನ್ನು ಗ್ರಾಮಸ್ಥರೇ ದಾನವಾಗಿ ನೀಡಿದ್ದಾರೆ. ಮಂಡ್ಯದ ಅನೇಕ ಗ್ರಾಮಗಳಲ್ಲಿ ಜನರು ಹಣ ಸಂಗ್ರಹಿಸಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ವಿಡಿಯೊದ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದೆ.
ಮಂಡ್ಯದ ದಡಮಹಳ್ಳಿಯ ಜನರು ನಿಖಿಲ್ ಗೆ ನಿನ್ನೆ ದೇಣಿಗೆಯಾಗಿ ಚುನಾವಣೆ ಖರ್ಚಿಗೆ ಹಣ ನೀಡಿದ್ದನ್ನು ನಿಖಿಲ್ ಪಡೆದುಕೊಂಡು ತಮ್ಮ ಕಾರ್ಯದರ್ಶಿಗೆ ನೀಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಜೆಡಿಎಸ್ ಹೇಳಿದೆ.
ನಿನ್ನೆ ಹೊರಬಿದ್ದ ಮತ್ತೊಂದು ವಿಡಿಯೊದಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಬೆಂಬಲಿಗರಿಂದ ನೋಟಿನ ಕಂತೆಯನ್ನು ಪಡೆದುಕೊಂಡು ತಮ್ಮ ಚುನಾವಣಾ ಪ್ರಚಾರದ ಮ್ಯಾನೇಜರ್ ಗೆ ನೀಡುತ್ತಿರುವುದು ಕೂಡ ಪ್ರಸಾರವಾಗಿದೆ. ಇದು ಮತದಾರರು ನಮ್ಮ ಕಡೆಗೆ ಇಟ್ಟಿರುವ ಒಲವನ್ನು ತೋರಿಸುತ್ತದೆ ಎಂದು ಜೆಡಿಎಸ್ ಹೇಳಿದೆ.

Comments are closed.