ಕರ್ನಾಟಕ

ಅನಂತ್ ಕುಮಾರ್ ಇದ್ದಾಗ ಬಿಜೆಪಿಗೆ ಮತ ಹಾಕುತ್ತಿದ್ದೆ: ಈಗ ಚಿಂತಿಸಬೇಕಾಗಿದೆ!

Pinterest LinkedIn Tumblr


ಬೆಂಗಳೂರು: ರಾಜ್ಯದ ಅತಿ ಹೆಚ್ಚು ಪ್ರತಿಷ್ಠಿತ ಕ್ಷೇತ್ರ ಎಂದು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಪರಿಗಣಿಸಲ್ಪಟ್ಟಿದೆ, ವಿದ್ಯಾವಂತರರು, ರಾಜಕೀಯ ಜ್ಞಾನವುಳ್ಳವರು ಹಾಗೂ ನಿರಕ್ಷಸ್ಥರಿರುವ ಕ್ಷೇತ್ರವಾಗಿದೆ.
ಬೇರೆ ಕ್ಷೇತ್ರಗಳಿಗೆ ಹೋಲಿಸಿದರೇ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಹೆಚ್ಚು ಸಂತೋಷದಿಂದ ಜಿವನ ಸಾಗಿಸುತ್ತಿದ್ದಾರೆ, ಬೇರೆ ಕ್ಷೇತ್ರಗಳಲ್ಲಿರುವಂತೆ ಕಸದ ಸಮಸ್ಯೆ, ಟ್ರಾಫಿಕ್, ರಸ್ತೆ ಹಾಗೂ ನೀರಿನ ಕೊರತೆಯಿಲ್ಲ, ಮೂಲಭೂತ ಸೌಕರ್ಯಗಳು ತಕ್ಕ ಮಟ್ಟಿಗಿವೆ.
ಈ ಲೋಕಸಭೆ ಕ್ಷೇತ್ರದ ಅಡಿಯಲ್ಲಿ ಬರುವ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕವಿದೆ, ಉತ್ತಮ ರಸ್ತೆಗಳು ಹಾಗೂ ಮೇಲ್ಸೇತುವೆ ಗಳಿವೆ, ಅಧಿಕ ಸಂಖ್ಯೆಯ ಉದ್ಯಾನವನಗಳಿವೆ ದುರಾದೃಷ್ಟ ವಶಾತ್ ಸರಿಯಾದ ನಿರ್ವಹಣೆಯಿಲ್ಲದೇ ಅವುಗಳು ಹಾಳಾಗಿವೆ.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆ, ದಿವಂಗತ ಅನಂತ್ ಕುಮಾರ್ ಇಲ್ಲಿ ಆರು ಬಾರಿ ಗೆದ್ದು ಸಂಸದರಾಗಿದ್ದರು, ಆದರೆ ಈ ಬಾರಿಯ ಚುನಾವಣೆ ಅಂದುಕೊಂಡಷ್ಟು ಸುಲಭವಾಗಿಲ್ಲ, ಬಿಜೆಪಿ ಕೊನೆ ಕ್ಷಣದಲ್ಲಿ 28 ವರ್ಷದ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ, ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದಾರೆ,
ಬಿಜೆಪಿ ಅಂತಿಮ ಹಂತದಲ್ಲಿ ಅಭ್ಯರ್ಥಿ ಪ್ರಕಟಿಸಿದ್ದು, ಇಲ್ಲಿನ ಬಹುತೇಕ ಜನತೆಗೆ ಅವರ ಮುಖ ಪರಿಚಯವೇ ಇಲ್ಲ, ಹೀಗಾಗಿ ಇದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಸಿಬ್ಬಂದಿ ನಾಗರಾಜು ಹೇಳಿದ್ದಾರೆ.. ನಾನು ಕಳೆದ 30 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ, ಪ್ರತಿಬಾರಿಯೂ ಎರಡನೇ ಯೋಚನೆ ಇಲ್ಲದೇ ಅನಂತ್ ಕುಮಾರ್ ಅವರಿಗೆ ಮತ ಚಲಾಯಿಸುತ್ತಿದ್ದೆ,.ಈ ಬಾರಿ ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ಸಿಗುತ್ತದೆ ಹಾಗಾಗಿ ಅವರಿಗೆ ಮತ ಹಾಕಲು ನಿರ್ಧರಿಸಿದ್ದೆ. ಆದರೆ 28 ವರ್ಷದ ಯುವಕ ಕಣಕ್ಕಿಳಿದಿದ್ದಾನೆ, ಅವನನ್ನು ಹೇಗೆ ನಂಬುವುದು, ಹೀಗಾಗಿ ಬಿಜೆಪಿಗೆ ಮತಹಾಕುವಾಗ ಚಿಂತಿಸಬೇಕಾಗಿದೆ.
ನಾನು ಕಳೆದ 45 ವರ್ಷಗಳಿಂದ ಇಲ್ಲಿ ವಾಸವಿದ್ದೇನೆ,ಈ ಬಾರಿ ಮತ ಹಾಕುವಾಗ ನಾವು ಯೋಚನೆ ಮಾಡಬೇಕಾಗಿದೆ, ನಾವು ಮತ ಹಾಕಿ ಆರಿಸುವ ವ್ಯಕ್ತಿ ನಮಗೆ ಸುಲಭವಾಗಿ ಸಿಗಬೇಕು, ನಮಗೆ ಬಹುಭಾಷೆ ಮಾತನಾಡುವ ಸ್ಕಿಲ್ ಇರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧವಾಗಿರುವ ವ್ಯಕ್ತಿ ನಮಗೆ ಬೇಡ, ನಾವು ಆರಿಸುವ ವ್ಯಕ್ತಿ ಕೇಂದ್ರದಿಂದ ಅನುದಾನ ತಂದು ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕು ಎಂದು ಲಕ್ಷ್ಮಿ ಕಾಂತ ಎಂಬ ಸ್ಥಲೀಯ ನಿವಾಸಿ ಹೇಳಿದ್ದಾರೆ.
ಇಲ್ಲಿ ಯಾರು ಅಭ್ಯರ್ಥಿ ಎಂಬುದು ಮುಖ್ಯವಾಗಲ್ಲ, ಮತ್ತೊಮ್ಮೆ ಮೋದಿ, ಅಲೆಯಷ್ಟೇ ಮುಖ್ಯವಾಗುತ್ತದೆ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ಎಲ್ಲರ ಬಯಕೆಯಾಗಿದೆ, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಲಾಗಿದೆ, ಆದರೆ ಇಲ್ಲಿ ಹರಿಪ್ರಸಾದ್ ಅವರು ಗೆಲ್ಲುವ ಸಾಧ್ಯತೆಯಿಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 25,677 ಮತಗಳಿಸಿದ್ದರು.
ಇಲ್ಲಿ ಎಲ್ಲಾ ಪಕ್ಷದವರು ಕೂಡ ಇಲ್ಲಿನ ಕೊಳತೆ ನಿವಾಸಿಗಳನ್ನು ನಿರ್ಲಕ್ಷ್ಯಿಸಿದ್ದಾರೆ.,ಹೆಚ್ಚಿನ ಸಂಖ್ಯೆಯ ಮತಗಳು ವಿದ್ಯಾವಂತರಾಗಿದ್ದಾರೆ, ಜೊತೆಗೆ ಗಣ್ಯ ವ್ಯಕ್ತಿಗಳು ಇದ್ದಾರೆ, ಕಳೆದ ಚುನಾವಣೆಯಲ್ಲೂ ಕೂಡ ಯಾವುದೇ ಪಕ್ಷದ ಅಭ್ಯರ್ಥಿ ಕೂಡ ನಮ್ಮನ್ನು ಸಂಪರ್ಕಿಸಿಲ್ಲ, ನಮ್ಮ ಮತಗಳು ಅವರಿಗೆ ಮುಖ್ಯವಲ್ಲ ಎಂದು ಕೊಳಗೇರಿ ನಿವಾಸಿಯೊಬ್ಬರು ಹೇಳಿದ್ದಾರೆ,
ಮಳೆಗಾಲದ ವೇಳೆ ನಮ್ಮ ಮನೆಗಳಿಗೆ ಪ್ರವಾಹ ಬರುತ್ತದೆ, ನಮಗೆ ನಮ್ಮ ಸ್ಥಳೀಯ ಕಾರ್ಪೋರೇಟರ್ ನಮಗೆ ಸಹಾಯ ಮಾಡುತ್ತಾರೆ, ಹೀಗಾಗಿ ಅವರು ಪ್ರತಿನಿಧಿಸುವ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಕಾವೇರಿಪುರ ಕೊಳಗೇರಿಯಲ್ಲಿರುವ ರತ್ನಮ್ಮ ಎಂಬುವರು ಹೇಳಿದ್ದಾರೆ.

Comments are closed.