ಕರ್ನಾಟಕ

ಸುಮಲತಾ ಅಂಬರೀಷ್ ಹೊಸ ‘ಮಹಾಘಟ್ ಬಂಧನ್’!

Pinterest LinkedIn Tumblr


ಮೈಸೂರು: ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಹಿರಿಯ ನಟಿ ಸುಮಲತಾ ಮುಂದಾಳತ್ವದಲ್ಲಿರುವ ಮಹಾಘಟ್ ಬಂಧನದ ವಿರೋಧಿಯಾಗಿದ್ದಾರೆ.
ಸುಮಲತಾ ಅವರ ಈ ಮಹಾಘಟಬಂಧನ ಮಂಡ್ಯ ಜಿಲ್ಲೆಯಲ್ಲಿ 8 ಶಾಸಕರು ಹಾಗೂ ಮೂರು ಸಚಿವರು ಎಂಎಲ್ ಸಿಗಳಿಗೆ ದೊಡ್ಡ ಸವಾಲಾಗಿದೆ.
ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೊದಲು ಎಲ್ಲಾ ರೀತಿಯಲ್ಲಿಯೂ ಲೆಕ್ಕಾಚಾರ ಹಾಕಿಕೊಂಡೇ ಕಣಕ್ಕಿಳಿದಿದ್ದಾರೆ, ಬಿಜೆಪಿ, ರೈತ ಸಂಘ, ಸ್ಥಳೀಯ ಕಾಂಗ್ರೆಸ್ ಮುಖಂಡರು, ಅಹಿಂದ ಮತ್ತು ಮಹಿಳಾ ಸಂಘಗಳು ಹಾಗೂ ಎಲ್ಲಾ ಪಕ್ಷದಲ್ಲಿರುವ ಅಂಬರೀಷ್ ಅಭಿಮಾನಿಗಳು ಸುಮಲತಾ ಅವರನ್ನು ಬೆಂಬಲಿಸುತ್ತಿದ್ದಾರೆ.
ಇದೇ ವೇಳೆ ಮಂಡ್ಯಕ್ಕೆ ಅಂಬರೀಷ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ, ಟಿಕೆಟ್ ಗಾಗಿ ಸುಮಲತಾ ಕಾಂಗ್ರೆಸ್ ಬಾಗಿಲು ಬಡಿದರು, ಜೊತೆಗೆ ಮಂಡ್ಯದ್ಯಾಂತ ಸಂಚರಿಸಿ ಜನತೆಯ ಮನಸ್ಸಿನ ನಾಡಿ ಮಿಡಿತ ಹಾಗೂ ಅವರು ಆಸೆಯನ್ನು ಅರಿತಕೊಂಡಿದ್ದಾರೆ.
ಭ್ರಷ್ಟಚಾರ ನಿರ್ಮೂಲನೆ, ರಾಜಕೀಯದಲ್ಲಿ ಜಾತಿ ಲೆಕ್ಕಾಚಾರಗಳ ವಿರುದ್ಧ ಹೋರಾಡುವುದಾಗಿ ಸುಮಲತಾ ಹೇಳಿದ್ದಾರೆ, ಸ್ವತಂತ್ರ್ಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು, ಒಕ್ಕಲಿಗ ಮತಗಳ ನಂತರ, ಅಲ್ಪಸಂಖ್ಯಾತ ವರ್ಗವಾದ ಕ್ರಿಶ್ಟಿಯನ್, ದಲಿತರ ಮತಗಳು ಪ್ರಮುಖವಾಗಿವೆ.
ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ,ಸುಮಲತಾ ಅವರಿಗೆ ಬೆಂಬಲಿಸುತ್ತಿದ್ದ ಸ್ಥಳೀಯ ಮುಖಂಡರನ್ನು ಅಮಾನತುಗೊಳಿಸಿದ ನಂತರ ಸುಮಲತಾ ಬಿಜೆಪಿ ಬೆಂಬಲ ಕೋರಿದ್ದಾರೆ, ಜೊತೆಗೆ, ರೈತ ಸಂಘದ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ ಕುಟುಂಬದ ಬೆಂಬಲ ಕೋರಿದ್ದಾರೆ. ಕೇವಲ ಒಕ್ಕಲಿಗರು ಹಾಗೂ ಸಿನಿಮಾ ರಂಗದವರು ಮಾತ್ರವಲ್ಲದೆ ಹಿಂದುಳಿದ ಹಾಗೂ ಎಲ್ಲ ಮುಖಂಡರು ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರ ನಡೆಸಲು ಸಚಿವ ಡಿ.ಕೆ.ಶಿವಕುಮಾರ್ ಅವರ ಸಹಾಯ ಪಡೆಯುತ್ತಿದ್ದಾರೆ, ಇದೇ ವೇಳೆ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಆದರೆ ಇದರ ವಿರುದ್ದ ಸುಮಲತಾ ಯಾವುದೇ ರೀತಿಯಲ್ಲಿ ಕೋಪಗೊಳ್ಳದೇ ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ, ಎದುರಾಳಿ ಪಕ್ಷದ ತೋಳ್ಬಲ ಮತ್ತು ಹಣ ಬಲದ ಬಗ್ಗೆ ಅರಿತಿರುವ ಸುಮಲತಾ ಅವರು ಬುದ್ದಿವಂತಿಕೆಯಿಂದ ಪರಿಸ್ಥಿತಿಯನ್ನ ನಿಭಾಯಿಸುತ್ತಿದ್ದಾರೆ.

Comments are closed.