ಕರ್ನಾಟಕ

ನಾಲ್ಕು ಜನ ಅಭಿಮಾನಿಗಳು ಕೊಟ್ಟ ಬಿರುದು ರಾಜ್ಯದ ಜನತೆ ಕೊಟ್ಟಂತಾಗುವುದಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಡಿಬಾಸ್​ ಯಾರು ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ದರ್ಶನ್, ಡಿಬಾಸ್ ಬಿರುದು ಅಭಿಮಾನಿಗಳು ಕೊಟ್ಟಿರುವ ಭಿಕ್ಷೆ ಎಂದು ಉತ್ತರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಈ ವಿಷಯವಾಗಿ ಮತ್ತೆ ಕುಮಾರಸ್ವಾಮಿ ಅವರು ಮತ್ತೊಂದು ಡೈಲಾಗ್​​ ಹೊಡೆದಿದ್ದಾರೆ. ನಾಲ್ಕೈದು ಅಭಿಮಾನಿಗಳು ಬಿರುದು ಕೊಟ್ಟರೆ ಆರೂವರೆ ಕೋಟಿ ಜನರು ಕೊಟ್ಟಂತಾಗುವುದಿಲ್ಲ ಎಂದು ಡಿಬಾಸ್​ಗೆ ಸಿಎಂ ತಿರುಗೇಟು ನೀಡಿದ್ದಾರೆ.

“ಡಿಬಾಸ್ ಅಂತ ನಾಲ್ಕೈದು ಅಭಿಮಾನಿಗಳು ಮಾತ್ರ ಅವರಿಗೆ ಬಿರುದು ಕೊಟ್ಟಿರೋದು. ಅವರಿಗೆ ಆರುವರೆ ಕೋಟಿ ಜನರು ಬಿರುದು ಕೊಟ್ಟಿದ್ದಾರಾ…? ಈಗ ನನ್ನ ಮಗನಿಗೂ ಕೂಡ ಯುವರಾಜ ಅಂತಾ ಬಿರುದು ಕೊಟ್ಟಿದ್ದಾರೆ. ಅವನು ಈಗ ಯುವರಾಜನಾ…? ಯಾರೋ ನಾಲ್ಕು ಜನ ಅಭಿಮಾನಿಗಳು ಬಿರುದು ಕೊಟ್ಟಿರುತ್ತಾರೆ. ಹಾಗಂತ ನಾವು ಏನೋ ದೊಡ್ಡದಾಗಿ ಮೆರೆಯೋಕೆ ಆಗುತ್ತಾ” ಎಂದು ನಟ ದರ್ಶನ್​ಗೆ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಅವರನ್ನು ಗೆಲ್ಲಿಸಿದರೆ ಅಂಬರೀಷ್​ ಅವರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ‌ನಾನು ಮಾತನಾಡಿಲ್ಲ, ಡಿಕೆಶಿ ಹೇಳಿದ್ದರೆ ಅವರನ್ನೇ ಹೋಗಿ ಕೇಳಿ ಎಂದ ಸಿಎಂ ‌ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ಅಂಬರೀಷ್​ ಹೆಸರನ್ನು ಸುಮಲತಾ ಉಪಯೋಗ ಮಾಡಿಕೊಳ್ಳುತ್ತಿರುವುದು. ನಾನು ಎಲ್ಲಾದರೂ ಅಂಬರೀಷ್​ ಹೆಸರು ಬಳಸಿದ್ದೀನಾ.? ನಾನು ದುಡಿಮೆಯ ಹೆಸರಿನಲ್ಲಿ ಮತ ಕೇಳ್ತಿದ್ದೇನೆ. ನಾನು ಎಲ್ಲಿಯೂ ಅಂಬರೀಷ್​ ಹೆಸರು ಬಳಸಿಲ್ಲ. ಶೀಘ್ರದಲ್ಲೇ ಪ್ರಚಾರ ಕೈಗೊಂಡಾಗ ಇದಕ್ಕೆಲ್ಲ ಉತ್ತರ ಕೊಡುತ್ತೇನೆ’ ಎಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ.

Comments are closed.