ಕರ್ನಾಟಕ

ತುಂಗಾ ನದಿಯಲ್ಲಿ ಸುಳಿಗೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಸಾವು

Pinterest LinkedIn Tumblr


ಚಿಕ್ಕಮಗಳೂರು: ತುಂಗಾನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವೇಳೆ ಸುಳಿಗೆ ಸಿಲುಕಿದ್ದ ಒಬ್ಬರನ್ನು ರಕ್ಷಣೆ ಮಾಡಲು ಹೋಗಿ ಒಂದೇ ಕುಟುಂಬದ ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ಶೃಂಗೇರಿಯ ವಿದ್ಯಾರಣ್ಯಪುರ ಬಳಿ ಭಾನುವಾರ ನಡೆದಿದೆ.

ಮೃತರನ್ನು ನಾಗೇಂದ್ರ, ಪ್ರದೀಪ್, ರಾಮಣ್ಣ ಮತ್ತು ರತ್ನಾಕರ್ ಎಂದು ಗುರುತಿಸಲಾಗಿದೆ. ಮೂವರು ಸಂಬಂಧಿಗಳು ರಾಮಣ್ಣ ಅವರ ಮನೆಗೆ ಕಾರ್ಯಕ್ರಮಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ತುಂಗಾ ನದಿಗೆ ಸ್ನಾನಕ್ಕಾಗಿ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಪ್ರದೀಪ್ ಎಂಬುವರು ಸುಳಿಯಲ್ಲಿ ಸಿಲುಕಿದ್ದು ಕಂಡು ಅವರ ರಕ್ಷಣೆ ಮಾಡಲು ಹೋಗಿ ಉಳಿದ ಮೂವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನುರಿತ ಈಜುಗಾರರ ಸಹಾಯದಿಂದ ನೀರಿನಲ್ಲಿ ಮುಳುಗಿದ್ದವರ ಮೃತದೇಹಗಳನ್ನು ಹುಡುಕಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶೃಂಗೇರಿ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

Comments are closed.