ಕರ್ನಾಟಕ

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಎಂದು ದೂರು ಕೊಟ್ಟ ವಕೀಲ

Pinterest LinkedIn Tumblr


ಮಂಡ್ಯ: ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಈಗಾಗಲೇ ಹಾಸನದಿಂದ ಸ್ಪರ್ಧಿಸುವುದಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯದ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಆದರೆ, ಸೋಮವಾರ ಅಂದರೆ ಮಾ. 25ರಂದು ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಆ ದಿನ ಗುಂಪು ಕಟ್ಟಿಕೊಂಡು ಬಂದು ನಾಮಪತ್ರ ಸಲ್ಲಿಕೆ ಮಾಡಿ ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ಮಂಡ್ಯದ ವಕೀಲರೊಬ್ಬರು ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಇರುವುದರಿಂದ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸುವಾಗ ಲಕ್ಷಾಂತರ ಜನರು ಸೇರುವ ಸಾಧ್ಯತೆಯಿದೆ. ಪರೀಕ್ಷಾ ಕೇಂದ್ರದ ಬಳಿಯಲ್ಲೇ ಲಕ್ಷಾಂತರ ಜನರ ಸಭೆ ನಡೆಸಲು ಜೆಡಿಎಸ್​ ಯೋಚಿಸುವುದರಿಂದ ಆ ಸಭೆಗೆ ಅನುಮತಿ ನೀಡಬಾರದೆಂದು ಮಂಡ್ಯದ ವಕೀಲ ಬಿ.ಎನ್​. ಶಂಕರ್​ ಮನವಿ ಮಾಡಿದ್ದಾರೆ.

ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ನಡೆಸಿ ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಜೆಡಿಎಸ್​ ನಿರ್ಧರಿಸಿದೆ. ಆದರೆ, ಇದರಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಕಾರಣದಿಂದ ಹೆಚ್ಚಿನ ಜನರನ್ನು ಸೇರಿಸದಂತೆ ಸೂಚಿಸಿ. ಶಾಲೆ ಬಳಿ ಸಮಾವೇಶಕ್ಕೆ ಅನುಮತಿ ನೀಡಬೇಡಿ ಎಂದು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

Comments are closed.