ಕರ್ನಾಟಕ

ಈಗ ನೇಮಕವಾಗಿರೋ ಲೋಕಪಾಲ್ ಗೆ ಕಣ್ಣು,ಕಿವಿ, ಕೈ ಕಾಲು ಏನೂ ಇಲ್ಲ: ನಿವೃತ್ತಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

Pinterest LinkedIn Tumblr

ಹಾಸನ : ದೇಶದಲ್ಲಿ ಲೋಕಪಾಲರ ನೇಮಕ ಮಾಡಲಾಗಿದ್ದು, ಈಗ ನೇಮಕವಾಗಿರೋ ಲೋಕಪಾಲ್ ಗೆ ಕಣ್ಣು,ಇಲ್ಲಾ,ಕಿವಿ.ಕೈ ಕಾಲು ಏನೂ ಇಲ್ಲವೆಂದು ಕೇಂದ್ರದ ನಡೆ ವಿರುದ್ದ ಪರೋಕ್ಷವಾಗಿ ಟೀಕಿಸಿದ ನಿವೃತ್ತಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಟೀಕಿಸಿದ್ದಾರೆ.

ಕರ್ನಾಟಕದ ಲೋಕಾಯುಕ್ತಕ್ಕೂ ಲೋಕಪಾಲ್ ಗೂ ಯಾವುದೇ ಸಂಬಂಧವಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಲೋಕಪಾಲ್ ರಚನೆ ಮಾಡಲಾಗಿದೆ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಅಲ್ಲದೇ ಕೆಲವರು ಚುನಾವಣೆ ಹಿನ್ನೆಲೆಯಲ್ಲಿ ಲೋಕಪಾಲ್ ನೇಮಕವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಲೋಕಪಾಲ್ ನೇಮಕವಾಗದೇ ಇದ್ದಿದ್ದರೆ ಶಿಕ್ಷೆಗೆ ಗುರಿಯಾಗುತ್ತಿದ್ದರು ಎಂದು ಹಾಸನದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ ಸಂಸ್ಥೆಯನ್ನು ಕಾಯ್ದೆಬದ್ಧವಾಗಿ ಸ್ಥಾಪಿಸಿ ಐದು ವರ್ಷ ಕಳೆದರೂ ಲೋಕಪಾಲರ ನೇಮಿಸದೇ ಟೀಕೆ ಎದುರಿಸುತ್ತಿದ್ದ ಕೇಂದ್ರ ಸರ್ಕಾರ ಕಳೆದ ಕೆಲ ದಿನಗಳ ಹಿಂದಷ್ಟೇ ಪಿ.ಸಿ ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರಾಗಿ ನೇಮಕ ಮಾಡಿದೆ.

Comments are closed.