ಕರ್ನಾಟಕ

ಬೇಕಾದರೆ ಬರೆದಿಟ್ಟುಕೊಳ್ಳಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ: ಎಚ್.ಡಿ.ರೇವಣ್ಣ

Pinterest LinkedIn Tumblr
H D Revanna , 

ಹಾಸನ: ದೇಶದಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬರಲ್ಲ. ಈಗಲೇ ಹೇಳ್ತೀನಿ‌ ಬರೆದಿಟ್ಟುಕೊಳ್ಳಿ ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ಹಾಸನದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ‌ ಭವಿಷ್ಯ ನುಡಿದಿದ್ದಾರೆ.

ಕಳೆದು ಐದು ವರ್ಷದಲ್ಲಿ ರಾಜ್ಯಕ್ಕೆ ಬಿಜೆಪಿಯ ಕೊಡುಗೆ ಏನು? ಎಂದು ವಾಗ್ದಾಳಿ ನಡೆಸಿದ ಬಿಜೆಪಿ ವಿರುದ್ದ ರೇವಣ್ಣ‌ ಪುತ್ರನ ಪರವಾಗಿ ಪ್ರಚಾರ ಮಾಡುತ್ತ ವಾಗ್ದಾಳಿ ನಡೆಸಿದರು. ರೈತರ ಖಾತೆಗೆ ಹಣ ಹಾಕ್ತೀವಿ ಅಂದಿದ್ದರು. ಆದರೆ ಬಂದಿದ್ದು ಕೇವಲ 6 ಜನಕ್ಕೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ ಎಂದು ಕೇಂದ್ರ ಸರಕಾರದ ಮೇಲೆ ಆರೋಪಿಸಿದರು.

ಬಿಜೆಪಿಗೆ ಇರೋದು ಕೇವಲ ಸುಳ್ಳಿನ ಅಪ ಪ್ರಚಾರ. ಅದು ಬಿಟ್ರೆ ಅವರಿಗೆ ಬೇರೆ ಏನೂ ಇಲ್ಲಾ ಎಂದು ಆಕ್ರೋಶ. ಬಿಜೆಪಿಯವರಿಗೆ ನಾಚಿಗೆ ಆಗಬೇಕು. ಯಾವ ಮುಖ ಇಟ್ಕೊಂಡು ಇವರು ಮತ ಕೇಳ್ತಾರೆ ಎಂದು ಪ್ರಶ್ನೆ ಮಾಡಿದರು.

Comments are closed.