ಬೆಂಗಳೂರು: ಪರ್ಸ್ ಮತ್ತು ಫೋನ್ ಮರೆತು ಬಂದಿದ್ದನ್ನು ಮತ್ತೆ ತೆಗೆದುಕೊಳ್ಳಲು ಮನೆಗೆ ಹೋದಾಗ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಪತಿಗೆ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಈ ವಿಷಯವನ್ನು ದೊಡ್ಡದು ಮಾಡಿದರೆ ಕೊಲ್ಲುವುದಾಗಿ ಸಹ ಪತ್ನಿ ಮತ್ತು ಪ್ರಿಯಕರ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪತಿ ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಅವರನ್ನು ಬಂಧಿಸಲಾಯಿತು.
ಕೋಣನಕುಂಟೆಯ ಗಣಪತಿಪುರ ನಿವಾಸಿ 33 ವರ್ಷದ ರಮೇಶ್ (ಹೆಸರು ಬದಲಿಸಲಾಗಿದೆ) ಮತ್ತು ಸಂಧ್ಯಾ(ಹೆಸರು ಬದಲಿಸಲಾಗಿದೆ) ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮೊನ್ನೆ ಮಾರ್ಚ್ 10ರಂದು ರಾತ್ರಿ ಸುಮಾರು 8.30ಕ್ಕೆ ರಮೇಶ್ ಮದುವೆ ರಿಸೆಪ್ಷನ್ ಗೆ ಹೊರಟಿದ್ದರು. ಮನೆಯಲ್ಲಿ ಪರ್ಸ್ ಮತ್ತು ಫೋನ್ ಬಿಟ್ಟು ಬಂದಿದ್ದೇನೆ ಎಂದು ನೆನಪಾಗಿ ಮತ್ತೆ ಹೋದರು. ಅದು ಮೊದಲು ಹೋಗಿ ಒಂದು ಗಂಟೆ ಕಳೆದ ನಂತರ ಬಂದಿದ್ದರು. ಮತ್ತೆ ಬಂದಾಗ ಮನೆಯ ಹೊರಗೆ ತನ್ನ ಸ್ನೇಹಿತ ಸುಂದರ್ (ಹೆಸರು ಬದಲಿಸಲಾಗಿದೆ) ನ ಬೈಕ್ ನಿಲ್ಲಿಸಿತ್ತು.
ಮನೆ ಬಾಗಿಲಿಗೆ ಬಂದು ಕಾಲಿಂಗ್ ಬೆಲ್ ಒತ್ತಿದಾಗ ಎಷ್ಟೇ ಹೊತ್ತಾದರೂ ಪತ್ನಿ ಬಾಗಿಲು ತೆಗೆಯಲಿಲ್ಲ. ಸುಮಾರು ಅರ್ಧ ಗಂಟೆ ಕಳೆದ ನಂತರ ಪತ್ನಿ ಬಾಗಿಲು ತೆಗೆದಳು. ಒಳ ಹೋಗಿ ನೋಡಿದಾಗ ಸುಂದರ್ ಅರೆನಗ್ನ ಸ್ಥಿತಿಯಲ್ಲಿದ್ದ. ಆಗಲೇ ರಮೇಶ್ ಗೆ ಕಳೆದ ಕೆಲ ಸಮಯಗಳಿಂದ ಪತ್ನಿ ಮತ್ತು ಸ್ನೇಹಿತ ಅಕ್ರಮ ಸಂಬಂಧದಲ್ಲಿದ್ದಾರೆ ಎಂದು ಗೊತ್ತಾಗಿದ್ದು. ಪ್ರಶ್ನೆ ಮಾಡಿದಾಗ ಇಬ್ಬರೂ ರಮೇಶ್ ಮೇಲೆ ಹಲ್ಲೆ ಮಾಡಲು ಆರಂಭಿಸಿದರು.
ಇದನ್ನು ಕುಟುಂಬದವರಿಗೂ ಹೇಳುತ್ತೇನೆ ಎಂದಾಗ ಇಬ್ಬರೂ ಮಕ್ಕಳನ್ನು ಕೊಂದುಬಿಡುವುದಾಗಿ ಧಮಕಿ ಹಾಕಿದರು. ಮೂವರೂ ಕಿರುಚುತ್ತಿರುವುದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಂಧ್ಯಾ ಮತ್ತು ಸುಂದರ್ ನ ಪತ್ನಿ ಒಟ್ಟಿಗೆ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ರಮೇಶ್ ಮತ್ತು ಸುಂದರ್ ಸ್ನೇಹಿತರಾಗಿದ್ದರು. ರಮೇಶ್ ಆಟೋ ಚಾಲಕನಾಗಿದ್ದರೆ ಸುಂದರ್ ಯಲಚೇನಹಳ್ಳಿಯಲ್ಲಿ ವಾಸಿಸುತ್ತಿದ್ದು ಜಯನಗರದಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ಎರಡೂ ಕುಟುಂಬದವರು ಇತ್ತೀಚೆಗೆ ಆತ್ಮೀಯವಾಗಿದ್ದರು. ಕಳೆದ ವರ್ಷ ನನ್ನ ಹೆಂಡತಿ ಸುಂದರ್ ಗೆ ರಾಖಿ ಕಟ್ಟಿದ್ದಳು, ಅವನನ್ನು ಅಣ್ಣ ಎಂದು ಕರೆಯುತ್ತಿದ್ದಳು ಎನ್ನುತ್ತಾರೆ ರಮೇಶ್.
ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ.
Comments are closed.