ಕರ್ನಾಟಕ

ನಿಧನ ಹೊಂದಿದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ: ನಾಳೆ ಅಂತ್ಯ ಸಂಸ್ಕಾರ

Pinterest LinkedIn Tumblr


ಬೆಂಗಳೂರು: ಇಂದು ನಿಧನ ಹೊಂದಿದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಅಂತ್ಯ ಸಂಸ್ಕಾರ ನಾಡಿದ್ದು (ಶನಿವಾರ) ಕೂಡಲ ಸಂಗಮದಲ್ಲಿ ನಡೆಯಲಿದೆ ಎನ್ನಲಾಗಿದೆ.

ನಾಳೆ 12 ಗಂಟೆಗೆ ಬೆಂಗಳೂರಿನಿಂದ ಮಾತೆ ಮಹಾದೇವಿಯವರ ಪಾರ್ಥಿವ ಶರೀರವು ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿ, ಚಿತ್ರದುರ್ಗ ಮಾರ್ಗವಾಗಿ ಕೂಡಲಸಂಗಮಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ರಾತ್ರಿ ಸಾರ್ವಜನಿಕರಿಗೆ ದರ್ಶನಕ್ಕೆ ಇಟ್ಟು ನಾಡಿದ್ದು (ಶನಿವಾರ) ಮಧ್ಯಾಹ್ನ 12 ಗಂಟೆಯ ನಂತರ ಅಂತಿಮ‌ ಸಂಸ್ಕಾರ ನಡೆಯಲಿದೆ ಎಂದು ಬಸವ ಮಂಟಪದ ಉತ್ತರಾಧಿಕಾರಿ ಗಂಗಾ ಮಾತಾಜಿ ಮಾಹಿತಿ ನೀಡಿದರು.

ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಮಾತೆ ಮಹಾದೇವಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿವೈಫಲ್ಯ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಾ.9 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಾತೆ ಮಹಾದೇವಿ, ಪ್ರಥಮ ಮಹಿಳಾ ಜಗದ್ಗುರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು ಎನ್ನಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಮುನ್ನಲೆಗೆ ಬಂದಾಗ ಹೋರಾಟದ ನೇತೃತ್ವ ವಹಿಸಿದ್ದು ಮಾತೆ ಮಹಾದೇವಿಯವರು. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುವವರೆಗೂ ಹೋರಾಟ ನಡೆಸುವುದಾಗಿ ಮಹಾದೇವಿ ಹೇಳಿದ್ದರು. ಜತೆಗೆ ದೆಹಲಿಯಲ್ಲೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದರು.

ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿದ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನು ಉಂಟುಮಾಡಿದೆ. ಕಿರಿಯ ವಯಸ್ಸಿನಲ್ಲೇ ಹಿರಿದಾದ ಜ್ಞಾನ ಗಳಿಸಿ ಜನಸಾಮಾನ್ಯರಿಗೆ ಧಾರೆಯೆರೆದ ಶಿವಶರಣೆಗೆ ಭಗವಂತ ಕೈಲಾಸವನ್ನು ಕರುಣಿಸಲಿ ಎಂದು‌ ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿದ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನು ಉಂಟುಮಾಡಿದೆ.
ಕಿರಿಯ ವಯಸ್ಸಿನಲ್ಲೇ ಹಿರಿದಾದ ಜ್ಞಾನ ಗಳಿಸಿ ಜನಸಾಮಾನ್ಯರಿಗೆ ಧಾರೆಯೆರೆದ ಶಿವಶರಣೆಗೆ ಭಗವಂತ ಕೈಲಾಸವನ್ನು ಕರುಣಿಸಲಿ ಎಂದು‌ ಪ್ರಾರ್ಥಿಸುತ್ತೇನೆ.
— H D Devegowda (@H_D_Devegowda) March 14, 2019

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಮಾತೆ ಮಹಾದೇವಿ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ

ಲಿಂಗಾಯತ ತತ್ವ ಪ್ರಚಾರದ ನಿಟ್ಟಿನಲ್ಲಿ ಅಸಂಖ್ಯಾತ ಕೃತಿಗಳನ್ನು ರಚಿಸಿದ ಮಾತೆ ಮಹಾದೇವಿ ಅವರು ಸಮಾಜವನ್ನು ಒಂದುಗೂಡಿಸುವುದರಲ್ಲಿ ನಿರತರಾಗಿದ್ದರು ಎಂದು ಅವರು ಸ್ಮರಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತವರ್ಗಕ್ಕೆ ಆ ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ

ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಲಿಂಗಾಯತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಮಾತೆ ಮಹಾದೇವಿ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ.ಅಸಂಖ್ಯಾತ ಕೃತಿಗಳನ್ನು ರಚಿಸಿದ ಮಾತೆ ಮಹಾದೇವಿ ಅವರು ಸಮಾಜವನ್ನು ಒಂದುಗೂಡಿಸುವುದರಲ್ಲಿ ನಿರತರಾಗಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತವರ್ಗಕ್ಕೆ ಆ ಭಗವಂತನು ನೀಡಲಿ.
— H D Kumaraswamy (@hd_kumaraswamy) March 14, 2019

ಮಾತೆ ಮಹಾದೇವಿ ಲಿಂಗೈಕ್ಯರಾಗಿರುವುದು ತುಂಬ ನೋವು ತಂದಿದೆ. ಚಿಕ್ಕ ವಯಸ್ಸಿನಲ್ಲಿಯೇ ಅವರು ಸನ್ಯಾಸ ಸ್ವೀಕರಿಸಿದ್ದರು. ಪ್ರಥಮ ಮಹಿಳಾ ಜಗದ್ಗುರು ಎಂದು ಗುರುತಿಸಲ್ಪಟ್ಟಿದ್ದರು. ಅವರ ಸಾವಿನ ಸುದ್ದಿ ತುಂಬ ನೋವುಂಟು ಮಾಡಿದೆ. ದೇಶ, ವಿದೇಶಗಳಲ್ಲಿ ಸಹ ಧರ್ಮ ಪ್ರಚಾರ ಮಾಡಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಬಸವ ಪೀಠಾಧ್ಯಕ್ಷೆ ಶರಣೆಮಾತೆ ಮಹಾದೇವಿಯವರು ಲಿಂಗೈಕ್ಯರಾಗಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಕಿರಿಯ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಶರಣ ಧರ್ಮದ ಪ್ರಚಾರದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಇವರ ಲಿಂಗೈಕ್ಯದಿಂದಾಗಿ ಶರಣರಿಗೆ ಹಾಗೂ ಅಪಾರ ಭಕ್ತ ಸಮೂಹಕ್ಕೆ ದುಃಖ ಭರಿಸುವ ಶಕ್ತಿ ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

— B.S. Yeddyurappa (@BSYBJP) March 14, 2019

ಮಾತೆ ಮಹಾದೇವಿಯವರ ನಿಧನ ಬಸವಪರಂಪರೆಗೆ ದೊಡ್ಡ ನಷ್ಟವಾಗಿದ್ದು, ಹೆಣ್ಣುಮಗಳಾಗಿ ಸಾಹಿತ್ಯದ ಜ್ಙಾನ ಅಪಾರ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರ ನಷ್ಟ ತುಂಬುವ ಅವಕಾಶ ದೇವರು ನೀಡಲಿ.

– ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ

ಮಾತೆ ಮಹದೇವಿ ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇವತ್ತು ಅವರು ನಮ್ಮನ್ನ ಅಗಲಿದ್ದಾರೆ.ಬಸವ ತತ್ವಗಳನ್ನ ಪ್ರಚುರಪಡಿಸಿದ್ದರು ಅವರ ನಿಧನ ತುಂಬಲಾರದ ನಷ್ಟವಾಗಿದೆ.

-ರಾಮಲಿಂಗಾರೆಡ್ಡಿ, ಮಾಜಿ ಸಚಿವ

ಮಾತೆ ಮಾಹಾದೇವಿ ಅವರು ಇಂದು ನಮ್ಮನ್ನ ಅಗಲಿದ್ದಾರೆ, ಇದು ನಮಗೆ ದುಃಖದ ಸಂಗತಿ. ಕೂಡಲಸಂಗಮದಲ್ಲಿ ಹಲವಾರು ಕಾರ್ಯಕ್ರಮಗಳನ್ನ ಮಾಡುವ ಮೂಲಕ ಬಸವ ತತ್ವವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಅವರ ಅಗಲಿಕೆ ಅವರ ಭಕ್ತರಿಗೆ ನೋವು ಭರಿಸುವ ಶಕ್ತಿ ನೀಡಲಿ.-

– ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಕರ್ನಾಟಕದ ಒಬ್ಬ ಶ್ರೇಷ್ಟ ಶಿವಶರಣಿ ನಮ್ಮನ್ನು ಅಗಲಿದ್ದಾರೆ. ಮಾತೆ ಮಹಾದೇವಿ ಅವರು ರಾಷ್ಟ್ರ ಕಂಡಂತ ಶ್ರೇಷ್ಟ ಆಧ್ಯಾತ್ಮವಾದಿ. ಮನೆ ಮನೆಗೆ ಬಸವ ತತ್ವವನ್ನು ತಲುಪಿಸುವಲ್ಲಿ ಶ್ರಮ ಪಟ್ಟವರು. ಸಂಘಟನೆ ಮೂಲಕ ಅನೇಕ ಹೋರಾಟಗಳನ್ನು ಮಾತೆ ಮಹಾದೇವಿ ಮಾಡಿದ್ದಾರೆ. ಮಾತೆ ಮಹಾದೇವಿ ಅವರು ಶ್ರೇಷ್ಟ ಸಾಹಿತಿ ಕೂಡ ಆಗಿದ್ದರು. ಅವರ ಅಗಲಿಕೆ ನಮಗೆ ತೀವ್ರ ದುಖಃ ತಂದಿದೆ.

– ಎಚ್​ ಕೆ ಪಾಟೀಲ್ , ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು

ರಾಜ್ಯದ ಕೆಲವೇ ಕೆಲ ಸಾದ್ವಿಗಳಲ್ಲಿ ಮಾತೇ ಮಹಾದೇವಿ ಒಬ್ಬರು. ಬಸವ ತತ್ವಕ್ಕೆ ಹೆಚ್ಚು ಮಹತ್ವ ಕೊಟ್ಟವರು ಮಾತೇ ಮಹಾದೇವಿ ಬಹಳ ಸ್ಪಷ್ಟ ಮತ್ತು ನಿರ್ಭೀತಿಯಿಂದ ಮಾತನಾಡುವ ಧೈರ್ಯ ಅವರಲ್ಲಿತ್ತು. ದೊಡ್ಡ ಶಕ್ತಿಯೊಂದನ್ನು ನಾವು ಕಳೆದುಕೊಂಡಿದ್ದೇವೆ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಬಸವ ಧರ್ಮದ ಪ್ರಕಾರ ಮರಣವೇ ಮಹಾನವಮಿ ನಮ್ಮಂಥ ಇನ್ನೂರಕ್ಕೂ ಹೆಚ್ಚು ಸಂತರನ್ನು ರೂಪಿಸಿದ ಆಧ್ಯಾತ್ಮಿಕ ತಾಯಿ ಮಾತೆ ಮಹಾದೇವಿ.

– ಚನ್ನಬಸವಾನಂದ ಸ್ವಾಮೀಜಿ

Comments are closed.