ಕರ್ನಾಟಕ

ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಮನೆಗೆ ಸುಮಲತಾ?

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಷ್‌ ಅವರು ಮಾರ್ಚ್ 15 ರಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಲಿದ್ದಾರೆ.

ಕೃಷ್ಣ ಅವರ ತವರು ಜಿಲ್ಲೆ ಮಂಡ್ಯ. ಹೀಗಾಗಿ, ತಮ್ಮ ಮುಂದಿನ ನಡೆ ಹಾಗೂ ಬೆಂಬಲ ಕೋರುವ ಸಂಬಂಧ ಸುಮಲತಾ ಅವರು ಮಾರ್ಚ್ 15ರ ಮಧ್ಯಾಹ್ನ 12ಗಂಟೆಗೆ ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಹಂಚಿಕೆ ಅನುಸಾರ ಈ ಕ್ಷೇತ್ರ ಜೆಡಿಎಸ್‌ ಪಾಲಾಗಿರುವುದರಿಂದ ಸುಮಲತಾ ಅವರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅಥವಾ ಬಿಜೆಪಿ ಅಭ್ಯರ್ಥಿಯಾಗುವುದು ಉಳಿದಿರುವ ದಾರಿ. ಹೀಗಾಗಿ ಕೃಷ್ಣ ಅವರ ಬೆಂಬಲ ಕೋರಲಿದ್ದಾರೆ ಎನ್ನಲಾಗಿದೆ.

Comments are closed.