ಕರ್ನಾಟಕ

ಬಾಗಲಕೋಟೆಯಲ್ಲಿ ಏಷ್ಯಾ ಖಂಡದ ಅತಿ ಎತ್ತರದ ಮಹಾರಥೋತ್ಸವ

Pinterest LinkedIn Tumblr


ಬಾಗಲಕೋಟೆ: ಬರೋಬ್ಬರಿ 65 ಅಡಿ ಎತ್ತರದ ಮಹಾರಥೋತ್ಸವ… ಮಹಾರಥೋತ್ಸವದಲ್ಲಿ ಭಾಗಿಯಾಗಿರೋ ಹಲವು ಮಠಾಧೀಶರು, ವಿದೇಶಿಗರು… ಕುಮಾರೇಶ್ವರ ಉಘೇ ಉಘೇ ಎಂದು ಮಹಾರಥೋತ್ಸವ ಎಳೆಯುತ್ತಿರೋ ಭಕ್ತರು… ಈ ಎಲ್ಲಾ ದೃಶ್ಯಗಳು ಕಂಡು ಬಂದಿರೋದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ… ಹೌದು.. ಪ್ರತಿವರ್ಷ ಮಹಾಶಿವರಾತ್ರಿಯಂದು ಶಿವಯೋಗ ಮಂದಿರದ ಲಿಂಗೈಕ್ಯ ಹಾನಗಲ್ ಕುಮಾರೇಶ್ವರ ಸ್ವಾಮೀಜಿಗಳ ಮಹಾರಥೋತ್ಸವ ಜರುಗುತ್ತೇ.. ಏಷ್ಯಾ ಖಂಡದಲ್ಲೇ ಅತೀ ಎತ್ತರ ಅಂದರೆ ೬೫ ಅಡಿ ಎತ್ತರ ರಥೋತ್ಸವ ಹೊಂದಿರೋ ಹೆಗ್ಗಳಿಕೆ. ಮಹಾರಥೋತ್ಸವಕ್ಕೂ ಮುನ್ನ ಸಂಪ್ರದಾಯಕವಾಗಿ ಪೂಜೆ ಪುನಸ್ಕಾರ ನಡೆಸಲಾಯ್ತು.ಇನ್ನು ಕಳ‌ಸಾರೋಹಣದ ಬಳಿಕ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಡಾ.ಸಂಗನಬಸವ ಮಹಾಸ್ವಾಮೀಜಿಯವರು ರಥೋತ್ಸವಕ್ಕೆ ಚಾಲನೆ ನೀಡಿದ್ರು. ಶಿವಯೋಗ ಮಂದಿರದಲ್ಲಿ ವಟುದೀಕ್ಷೆ ಪಡೆದ ಸ್ವಾಮೀಜಿಗಳು ನಾಡಿನ ಪ್ರತಿಷ್ಠಿತ ಮಠಗಳಿಗೆ ಮಠಾಧೀಶರಾಗಿದ್ದಾರೆ.ಪ್ರತಿ ವರ್ಷ ನಡೆಯೋ ಜಾತ್ರೆಗೆ ಮಠಾಧೀಶರು ಬರ್ತಾರೆ. ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಭಕ್ತರು ಮಹಾರಥೋತ್ಸವದಲ್ಲಿ ಭಾಗಿಯಾಗಿ, ಕುಮಾರೇಶ್ವರ ಕರ್ತೃ ಗದ್ದುಗೆ ದರ್ಶನ ಪಡೆದು ಪುನೀತರಾಗುತ್ತಾರೆ.

ಚೊಳಚಗುಡ್ಡ ಗ್ರಾಮದ ಭಕ್ತ ಯಮನೂರಪ್ಪ ಹಾದಿಮನಿ, 110 ಕೆಜಿ ರುದ್ರಾಕ್ಷಿಮಾಲೆ ಸಮರ್ಪಿಸಿದ್ರು. ಶಿರಬಡಗಿ ಗ್ರಾಮದ ಭಕ್ತರು ಭಜನೆಯೊಂದಿಗೆ ರಥೋತ್ಸವದ ಹಗ್ಗವನ್ನು ತರುತ್ತಾರೆ. ಇನ್ನು ವಿಶೇಷ ಅಂದ್ರೆ ಮಹಾರಥೋತ್ಸವಕ್ಕೆ ಭಕ್ತರು ಹೂವು ಸಮರ್ಪಿಸ್ತಾರೆ. ಕೆಲವು ಮಹಾರಥೋತ್ಸವಕ್ಕೆ ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸ್ತಾರೆ. ಇಲ್ಲಿ ಮಹಾರಥೋತ್ಸವಕ್ಕೆ ಹೂ ಸಮರ್ಪಿಸೋ ಸಂಪ್ರದಾಯವಿದೆ. ಮಹಾರಥೋತ್ಸವದಲ್ಲಿ ಭಾಗಿಯಾದ ಅಪಾರ ಭಕ್ತ ಸಮೂಹ ಶಿವನ ಹಾಗೂ ಶಿವಯೋಗಿಗಳ ಸ್ಮರಣೆ ಮೂಲಕ ರಥ ಎಳೆದರು. ಜಾತ್ರಾ ಮಹೋತ್ಸವದಲ್ಲಿ ಮೂರುಸಾವಿರ ಮಠದ ಜಗದ್ಗುರು ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು, ಹಿರೇಮಠ ನಂದವಾಡಗಿಯ ಶ್ರೀ ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಕಡಕೋಳ ವಿರಕ್ತಮಠದ ಶ್ರೀಸಚ್ಚಿದಾನಂದ ಸ್ವಾಮಿಗಳು, ಕಮತಗಿ ಹುಚ್ಚೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಮಾಹಾಸ್ವಾಮಿಗಳು, ಮಂಟೂರ ಅಂಕಲಿಮಠದ ಶ್ರೀ ಅಡವಿ ಮಹಾಸ್ವಾಮಿಗಳು, ಹುಬ್ಬಳ್ಳಿ ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಹುಬ್ಬಳ್ಳಿ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ, ಶಿವಯೋಗಮಂದಿರದ ವಟುಸಾಧಕರು, ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ರು.

ಒಟ್ಟಿನಲ್ಲಿ ಬಾಗಲಕೋಟೆ ಶಿವಯೋಗ ಮಂದಿರದ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರದ ಮಧ್ಯೆ ಜರುಗಿತು. ಭಕ್ತರು ತಮ್ಮ ಇಷ್ಟಿತಾರ್ಥ ಈಡೇರಿಸುವಂತೆ ಭಕ್ತಿಭಾವದಿಂದ ರಥೋತ್ಸವಕ್ಕೆ ನಮಿ‌ಸಿದ್ರು.

Comments are closed.