ಕರ್ನಾಟಕ

ನಾಥುರಾಮ್ ಗೋಡ್ಸೆ ಪರ ಮಾತನಾಡುವವರು ತಾಕತ್ ಇದ್ದರೆ ಪ್ರಧಾನಿ ಮೋದಿಯವರನ್ನು ಗುಂಡಿಟ್ಟು ಸಾಯಿಸಿ: ಬೇಳೂರು ಗೋಪಾಲಕೃಷ್ಣ

Pinterest LinkedIn Tumblr

ಬೆಂಗಳೂರು: ನಾಥುರಾಮ್ ಗೋಡ್ಸೆ ಪರ ಮಾತನಾಡುವವರು ತಾಕತ್ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲಿ ಎಂದು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ ನೀಡಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬೇಳೂರು ಗೋಪಾಲ ಕೃಷ್ಣ ಅವರ ಹೇಳಿಕೆಯ ವಿಡಿಯೋ ತುಣುಕನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಪ್ರಧಾನಿ ಹತ್ಯೆಗೆ ಕರೆ ನೀಡಿರುವ ಆರೋಪದಡಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ. ಕರ್ನಾಟಕ ಬಿಜೆಪಿಯ ಅಧಿಕೃತ ಟ್ವೀಟ್ ಖಾತೆಯಿಂದ ಗೋಪಾಲ ಕೃಷ್ಣ ಅವರ ಹೇಳಿಕೆಯ ವಿಡಿಯೋ ಪ್ರಕಟವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಆಯುಕ್ತರು, ಕೇಂದ್ರ ಗೃಹ ಇಲಾಖೆಯ ಟ್ವೀಟ್ ಖಾತೆಗೆ ಟ್ಯಾಗ್ ಮಾಡಲಾಗಿದೆ.

ಗಾಂಧಿ ಬದುಕಿದ್ದರೆ ಗುಂಡಿಟ್ಟು ಸಾಯಿಸುತ್ತೇವೆ ಎಂದು ಹಿಂದೂ ಮಹಾಸಭಾ ನಾಯಕಿ ಹೇಳುತ್ತಾರೆ. ಮೋದಿ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಭರವಸೆ ಹುಸಿಯಾಗಿದೆ ಎಂದಾದರೆ ನಿಮ್ಮ ಪ್ರಧಾನಿ ಮೋದಿಯನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಬೇರೆ ಯಾರನ್ನೂ ಸಾಯಿಸುವುದು ಬೇಡ ಎಂದು ಹೇಳಿದ್ದರು.

ಇದೇ ವೇಳೆ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಖಾಸಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೇಳೂರು ಗೋಪಾಲ ಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಯಿಸಿ ಎಂದು ಹೇಳಿದ್ದರೆ ಅದು ತಪ್ಪು, ಆದರೆ ಹತ್ಯೆ ಮಾಡಿ ಎಂದು ಹೇಳಿಕೆ ನೀಡಿಯೇ ಇಲ್ಲ. ಹತ್ಯೆ ಮಾಡಿ ಎಂದು ಹೇಳಿಕೆ ನೀಡಿದ್ದಲ್ಲಿ ನಾನು ಕ್ಷಮೆ ಕೇಳುತ್ತಿದ್ದೆ, ಆದರೆ ನಾನು ಆ ರೀತಿ ಹೇಳಿಕೆ ಕೊಟ್ಟೇ ಇಲ್ಲ, ಪ್ರಧಾನಿ ಮೋದಿ ಅವರನ್ನು ಸಾಯಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದೇನೆ ಎಂದು ಹಿಂದೂ ಸಭಾಗೆ ನಾನು ಪ್ರಶ್ನೆ ಮಾಡಿದ್ದೇನೆ ಎಂದಿದ್ದಾರೆ. ಎಂದು ಗೋಪಾಲಕೃಷ್ಣ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Comments are closed.