ಕರ್ನಾಟಕ

ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿಸಿದ ‘ಅಭಿನಂದನ್’ ಮೀಸೆ ! ಯುವಕರು ಫುಲ್ ಫಿದಾ…

Pinterest LinkedIn Tumblr

ಬೆಂಗಳೂರು: ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ಪಾಕ್ ನೆಲದಲ್ಲೇ ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಇದೀಗ ದೇಶಾದ್ಯಂತ ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದು, ಇದೀಗ ಸಿಲಿಕಾನ್ ಸಿಟಿಗೂ ಅಭಿನಂದನ್ ಮೀಸೆ ಶೈಲಿ ಕಾಲಿಟ್ಟಿದೆ.

ಅಭಿನಂದನ್ ವರ್ತಮಾನ್ ಅವರ ಧೈರ್ಯ, ಸಾಹಸವನ್ನು ದೇಶದ ಜನತೆ ಮೆಚ್ಚಿಕೊಂಡಿದ್ದು, ಈಗ ಅವರ ಮೀಸೆಯೂ ಜನರ ಪ್ರೀತಿಗೆ ಕಾರಣವಾಗಿದೆ. ಈ ಹಿಂದೆ ಇದೇ ಅಭಿನಂದನ್ ಮೀಸೆಯನ್ನು ಪಾಕಿಸ್ತಾನದ ನಟಿ ವೀಣಾ ಮಲಿಕ್ ಸಹ ನಾನು ಇದುವರೆಗೂ ಈ ರೀತಿಯ ಮೀಸೆಯನ್ನು ಎಲ್ಲೂ ನೋಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಭಿನಂದನ್ ಅವರನ್ನು ಪಾಕಿಸ್ತಾನದ ವಶಕ್ಕೆ ಪಡೆದಾಗ ಪಾಕ್ ಪರ ಮಾತನಾಡಿ ಟ್ರೋಲ್ ಗೊಳಗಾಗಿದ್ದ ವೀಣಾ ಮಲಿಕ್ ನಂತರ, ಅಭಿನಂದನ್ ಮೀಸೆಯ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಇದೀಗ ಇದೇ ಮೀಸೆ ಬೆಂಗಳೂರಿನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದು, ಸಿಲಿಕಾನ್ ಸಿಟಿಯ ಯುವಕರು ಈ ಹೊಸ ಮಾದರಿಯ ಮೀಸೆಗೆ ಮಾರು ಹೋಗಿದ್ದಾರೆ. ಬೆಂಗಳೂರಿನ ಹಲವು ಬಾರ್ಬರ್ ಶಾಪ್ ಗಳಲ್ಲಿ ಯುವಕರು ಕೇಳಿ ಕೇಳಿ ಇದೇ ಮೀಸೆಯ ಶೈಲಿ ಮಾಡಿಸಿಕೊಳ್ಳುತ್ತಿದ್ದಾರೆ.

Comments are closed.