ಕರ್ನಾಟಕ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ 22 ಸ್ಥಾನ ಲಭ್ಯವಾದರೆ ದೇಶಕ್ಕೆ ಇನ್ನೊಮ್ಮೆ ಕನ್ನಡಿಗ ಪ್ರಧಾನಿ ದೊರಕಲಿದ್ದಾರೆ: ಸಿಎಂ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಕನಿಷ್ಠ ಪಕ್ಷ 20-22 ಸ್ಥಾನ ಲಭ್ಯವಾದದ್ದಾದರೆ ದೇಶಕ್ಕೆ ಇನ್ನೊಮ್ಮೆ ಕನ್ನಡಿಗ ಪ್ರಧಾನಿ ದೊರಕಲಿದ್ದಾರೆ. ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

“ಕನ್ನಡಿಗರು ಆಶೀರ್ವದಿಸಿದರೆ ಏನೆಲ್ಲವೂ ಸಾಧ್ಯವಿದೆ ಇದು (ಕನ್ನಡಿಗ ಪ್ರಧಾನಿ) ಆಗುವುದು ಸಾಧ್ಯವಿಲ್ಲವೆ?” ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕುಮಾರಸ್ವಾಮಿ ಈ ಮಾತು ಹೇಳಿದ್ದಾರೆ.

“1996ರಲ್ಲಿ ಸಹ ಕರ್ನಾಟಕದ ಜನತೆ ಆಶೀರ್ವಾದದೊಡನೆ 16 ಸ್ಥಾನಗಳನ್ನು ಗಳಿಸಿ ಕನ್ನಡಿಗರಾದ ನಮ್ಮ ತಂದೆ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದರು.ಈ ಬಾರಿ ಮತ್ತೆ 20-22 ಸ್ಥಾನ ಗಳಿಸಿಕೊಟ್ಟದ್ದಾದರೆ ಮತ್ತೆ ಕನ್ನಡಿಗರೊಬ್ಬರು ಪ್ರಧಾನಿಗಳಾಗುವುದು ಸಾಧ್ಯವಿದೆ.” ಅವರು ಹೇಳಿದ್ದಾರೆ.

“ಜಯಗಳಿಸಿದ ಕ್ಷೇತ್ರ, ಜಾತಿಯ ಆಧಾರದಲ್ಲಿ ಣಾನೆಂದೂ ರಾಜಕೀಯ ಮಾಡಿಲ್ಲ.ಆದರೆ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆದಿದೆ.” ಸಿಎಂ ಹೇಳಿದ್ದಾರೆ.

Comments are closed.