ಕರ್ನಾಟಕ

ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪ ಕಾಡಿನಲ್ಲಿ ಬೆಂಕಿ : 15 ಎಕರೆ ಬೆಂಕಿಗಾಹುತಿ

Pinterest LinkedIn Tumblr

ಮೈಸೂರು: ಬೆಂಕಿಯ ಜ್ವಾಲೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಾವಿರಾರು ಹೆಕ್ಟೇರ್​ ಅರಣ್ಯ ಪ್ರದೇಶ ಆಹುತಿಯಾಗಿದೆ. ಇದರ ಬೆನ್ನಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ಸಮೀಪ ಕಾಡಿನಲ್ಲೂ ಬೆಂಕಿ ಕಾಣಿಸಿಕೊಂಡಿದೆ.

ರಾತ್ರಿಸುಮಾರು 12.50ರ ಸುಮಾರಿಗೆ ಬೆಂಕಿ ಹತ್ತಿಕೊಂಡಿರುವ ಬಗ್ಗೆ ಮಾಹಿತಿ ಬಂತು. ಅರಣ್ಯಾಧಿಕಾರಿಗಳು ಸಂಜೆಯೇ ನಮಗೆ ಎಚ್ಚರಿ ನೀಡಿದ್ದರು, ಹೀಗಾಗಿ ನಾವು ಕೂಡಲೇ ಅಲ್ಲಿಗೆ ತೆರಳಿ ಬೆಂಕಿ ನಿಯಂತ್ರಣಕ್ಕೆ ತರಲು ಸಹಾಯವಾಯಿತು, ಹೀಗಾಗಿಯೂ ಸುಮಾರು 15 ಎಕರೆ ನಾಶವಾಗಿದೆ ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ ಗುರುರಾಜ್ ತಿಳಿಸಿದ್ದಾರೆ.

ಇನ್ನೂ ಅಗ್ನಿಗಾಹುತಿಯಾಗಿರುವ ಭೂಮಿ ಬಿಜಿಎಸ್ ಟ್ರಸ್ಟ್ ಗೆ ಸೇರಿದ್ದಾಗಿದೆ. ಚಾಮುಂಡಿಬೆಟ್ಟದ ಸುತ್ತಮುತ್ತಲು ಅನೇಕ ಪ್ರದೇಶಗಳು ಸುಟ್ಟು ಕರಕಲಾಗಿದೆ., ಒಣ ಹುಲ್ಲು ಹಾಗೂ ಮರದ ತರಗೆಲೆಗಳಿಂದ ಬೆಂಕಿ ಹೊತ್ತಿಕೊಂಡಿದ್ದು ಎಲ್ಲೆಡೆ ಪಸರಿಸಿದೆ.ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

Comments are closed.