ರಾಷ್ಟ್ರೀಯ

ಆರ್ಟಿಕಲ್ 35ಎ ರದ್ದು ವಿಚಾರ; ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲು ಬೇರೆ ಧ್ವಜ ಹಿಡಿಯಬೇಕಾಗುತ್ತದೆ: ಮುಫ್ತಿ ಎಚ್ಚರಿಕೆ

Pinterest LinkedIn Tumblr

ಶ್ರೀನಗರ: ನಿಮ್ಮ ವಕ್ರ ನಿರ್ಧಾರದಿಂದಾಗಿ ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಬೇರೆ ಧ್ವಜ ಹಿಡಿಯಬೇಕಾಗುತ್ತದೆ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಾಶ್ಮೀರಗರಿಗೆ ವಿಶೇಷ ಹಕ್ಕು ನೀಡುವ ಆರ್ಟಿಕಲ್ 35ಎ ಅನ್ನು ಹಿಂದಕ್ಕೆ ಪಡೆಯುತ್ತದೆ ಎಂಬ ಊಹಾಪೋಹ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಬೆಂಕಿಯೊಂದಿಗೆ ಸರಸವಾಡಬೇಡಿ.. ನಿಮ್ಮ ನಿರ್ಧಾರದಿಂದ ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಕಾಶ್ಮೀರ ಜನತೆ ಬೇರೆ ಧ್ವಜ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕಾಶ್ಮೀರ ಜನತೆಗೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35ಎ ಅನ್ನು ನಿಷೇಧಿಸಲು ಹೊರಟಿದೆ. ಆದರೆ ಇದರ ಗಂಭೀರ ಪರಿಣಾಮ ಏನಾಗಬಹುದು ಎಂಬ ಅರಿವೇ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಮೋದಿ ಸರ್ಕಾರ ಬೆಂಕಿಯೊಂದಿಗೆ ಸರಸವಾಡಬಾರದು.

ಆರ್ಟಿಕಲ್ 35ಎ ರದ್ದಾದರೆ, ಕಾಶ್ಮೀರ ಜನತೆ ತ್ರಿವರ್ಣ ಧ್ವಜದ ಬದಲಿಗೆ ಬೇರೆ ಧ್ವಜ ಹಿಡಿಯುವಂತೆ ನೀವೇ ಒತ್ತಡ ಹೇರಬೇಡಿ. 1947ರ ನಂತರ ಈ ವರೆಗೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಮುಂದೆಯೂ ನಿರ್ಮಾಣವಾಗಬಾರದು ಎಂಬುದು ನಮ್ಮ ಅನಿಸಿಕೆ. ಆದರೆ ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆ ಮುಂದುವರೆಸಿ ಆರ್ಟಿಕಲ್ 35ಎ ರದ್ದು ಮಾಡಿದರೆ ಖಂಡಿತಾ ಆಗ ಕಾಶ್ಮೀರ ಜನತೆ ತಿರುಗಿಬಿದ್ದು, ಬೇರೆ ಧ್ವಜ ಹಿಡಿಯುತ್ತಾರೆ ಎಂದು ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

Comments are closed.