ಕರ್ನಾಟಕ

ಅನಿತಾ ಕುಮಾರಸ್ವಾಮಿಯವರಿಗೆ ಡಬಲ್ ಧಮಾಕ

Pinterest LinkedIn Tumblr


ರಾಮನಗರ: ಅನಿತಾ ಕುಮಾರಸ್ವಾಮಿಯವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. ಜೊತೆಗೆ ಶಾಸಕಿಯಾಗಿ ನೂರು ದಿನ ಪೂರೈಸಿರುವ ಸಂಭ್ರಮವೂ ಹೌದು. ಹಾಗಾಗಿ ಡಬಲ್ ಧಮಾಕಾ!

ರಾಮನಗರದ ಶಾಸಕಿ ಆಗಿರುವ ಅನಿತಾ ಕುಮಾರಸ್ವಾಮಿ ಗ್ರಾಮದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷ ಎಂದರೆ ಚರ್ಚ್, ದರ್ಗಾ ಹಾಗೂ ಗಣಪತಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಅನಿತಾ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕರ್ತರು ಹಾಗೂ ಮುಖಂಡರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಮಾಡಿದರು.

Comments are closed.